Save Balkunje

Save Balkunje Contact information, map and directions, contact form, opening hours, services, ratings, photos, videos and announcements from Save Balkunje, Mangalore.

  ಕೈಗಾರಿಕೆಗಳಿಗಾಗಿ ಕಳೆದುಕೊಂಡ ಫಲವತ್ತಾದ ಹಚ್ಚ ಹಸಿರಿನ ಭೂಮಿ ಅಭಿವೃದ್ಧಿಯ ಗಂಧಗಾಳಿ ಇಲ್ಲದೆ ಹಡಿಲು ಬಿದ್ದಿದೆ... ಮೊದಲು ಅದನ್ನು ಅಭಿವೃದ್ಧಿ...
24/06/2022

ಕೈಗಾರಿಕೆಗಳಿಗಾಗಿ ಕಳೆದುಕೊಂಡ ಫಲವತ್ತಾದ ಹಚ್ಚ ಹಸಿರಿನ ಭೂಮಿ ಅಭಿವೃದ್ಧಿಯ ಗಂಧಗಾಳಿ ಇಲ್ಲದೆ ಹಡಿಲು ಬಿದ್ದಿದೆ... ಮೊದಲು ಅದನ್ನು ಅಭಿವೃದ್ಧಿ ಮಾಡಿ.....
ಬಳ್ಕುಂಜೆ ಉಳಿಸಿ

ಮಂಗಳೂರು: ಸ್ವಚ್ಛ ಶಾಂಭವಿಗೂ ಇನ್ನು ಕೈಗಾರಿಕಾ ವಿಷ ಕುಣಿಕೆ..!
24/06/2022

ಮಂಗಳೂರು: ಸ್ವಚ್ಛ ಶಾಂಭವಿಗೂ ಇನ್ನು ಕೈಗಾರಿಕಾ ವಿಷ ಕುಣಿಕೆ..!

*   ಬಳ್ಕುಂಜೆ ಕೈಗಾರಿಕಾ ಪ್ರದೇಶಕ್ಕೆ ಸಾವಿರ ಎಕರೆ ಭೂಸ್ವಾಧೀನ ಸಿದ್ಧತೆ *   ಫಲ್ಗುಣಿ ಬಳಿಕ ಮತ್ತೊಂದು ನದಿ ಹಾನಿ ಆತಂಕ *  ಶೇ.90ಕ್...

24/06/2022

ಬೆಂಕಿ ಬಿದ್ದಿದೆ ಮನೆಗೆ ಓ...ಬೇಗ ಬನ್ನಿ, ಎಲ್ಲೆಲ್ಲೂ ಎದ್ದೆದ್ದು ಓಡಿ ಬನ್ನಿ...

ಕೈಗಾರಿಕರಣದ ಹೆಸರಿನಲ್ಲಿ ಫಲವತ್ತಾದ ತುಳುನಾಡಿನ ಭೂಮಿಯನ್ನು ನಾಶ ಮಾಡಲು ಹೊಂಚುಹಾಕುತ್ತಿರುವವರಿಗೆ ಧಿಕ್ಕಾರವಿರಲಿ...

ಬಳ್ಕುಂಜೆ ಯ ಬಗ್ಗೆ ಧ್ವನಿಯೆತ್ತಿ.... ತುಳುನಾಡನ್ನು ಉಳಿಸಿ..

07/02/2017

Local business

01/02/2017

12:18 PMಕರಾವಳಿ ಹೈವೇಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು. ಸಾರಿಗೆ ಕ್ಷೇತ್ರಕ್ಕೆ 2.41 ಲಕ್ಷ ಕೋಟಿ ರೂಪಾಯಿ ಅನುದಾನ. ಆಲ್ ಲೈನ್ ನಲ್ಲಿ ಎಫ್ ಡಿಐ ಪ್ರಸ್ತಾವನೆ. 1ಕೋಟಿ 50 ಲಕ್ಷ ಹಳ್ಳಿಗಳಿಗೆ ಬ್ರಾಡ್ ಬ್ಯಾಂಡ್ ಯೋಜನೆ.
12:14 PMಎಲ್ಲಾ ರಾಷ್ಟ್ರೀಯ ಬ್ಯಾಂಕ್ ಗಳಿಗೆ 10 ಸಾವಿರ ಕೋಟಿ ಅನುದಾನ. ಪೇಮೆಂಟ್ ನಿಯಂತ್ರಣ ಮಂಡಳಿ ಸ್ಥಾಪನೆ. ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಡಿಜಿಟಲ್ ಪಾವತಿ ಕಡ್ಡಾಯ.
12:13 PMಅಕ್ರಮ ಚಿಟ್ ಫಂಡ್ ಗಳಿಗೆ ಕಡಿವಾಣ ಹಾಕಲು ದಿಟ್ಟ ಕ್ರಮ. 25 ಲಕ್ಷ ಕೋಟಿ ಜನರಿಂದ ಭೀಮ್ ಆಪ್ ಬಳಕೆ. ಮುದ್ರಾ ಯೋಜನೆಯಡಿ ಸಾಲ ವಿತರಣೆ. ಭೀಮ್ ಆಪ್ ಬಳಕೆದಾರರಿಗೆ 2 ಹೊಸ ಯೋಜನೆ. ಬ್ಯಾಂಕಿಂಗ್ ವಲಯದಲ್ಲಿ ಡಿಜಿಟಲ್ ಕ್ರಾಂತಿ.
12:11 PMಟೆಕ್ಸ್ ಟೈಲ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಯೋಜನೆ. ಎಲ್ಲಾ ಪರೀಕ್ಷಗಳಿಗೆ ಒಂದೇ ಒಂದು ಪ್ರಾಧಿಕಾರ. ದೇಶದಲ್ಲಿ 2 ಹೊಸ ತೈಲಾಗಾರ ಸ್ಥಾಪನೆ ಯೋಜನೆ. ಹಣಕಾಸು ವಲಯದಲ್ಲಿ ಸೈಬರ್ ಸೆಕ್ಯುರಿಟಿಗೆ ಒತ್ತು.
12:06 PMರೈಲ್ವೆ ಸುರಕ್ಷಾ ಯೋಜನೆಗೆ 1 ಲಕ್ಷ ಕೋಟಿ ರೂಪಾಯಿ, ದೇಶದಲ್ಲಿ 70 ರೈಲ್ವೆ ಯೋಜನೆಗಳಿಗೆ ಅಸ್ತು.
12:05 PMತೀರ್ಥಯಾತ್ರಗೆ ವಿಶೇಷ ರೈಲುಗಳ ಆಯೋಜನೆ.ರೈಲ್ವೆ ಮಾರ್ಗ ಅಭಿವೃದ್ಧಿಗೆ 1.31ಲಕ್ಷ ಕೋಟಿ ರೂಪಾಯಿ ಅನುದಾನ. 25 ರೈಲ್ವೆ ನಿಲ್ದಾಣ ನವೀಕರಣ ಮತ್ತು ಅಭಿವೃದ್ಧಿ. ದೂರು ನೀಡಿದರೆ, ತಕ್ಷಣ ರೈಲ್ವೆ ಬೋಗಿಗಳ ಶುಚಿತ್ವಕ್ಕೆ ಅವಕಾಶ.
12:03 PMರೈಲ್ವೆ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿದರೆ ಸರ್ವಿಸ್ ಚಾರ್ಜ್ ಇಲ್ಲ. 3500 ಕಿಮೀ ಹೊಸ ರೈಲ್ವೆ ಹಳಿಗಳಿಗೆ ಯೋಜನೆ. ಬಂಡವಾಳ ಹೂಡಿಕೆ ಸುರಕ್ಷತೆಗೆ ಒತ್ತು.
12:02 PMಇ ಟಿಕೆಟ್ ಮೇಲೆ ಸರ್ವಿಸ್ ಚಾರ್ಜ್ ಇರುವುದಿಲ್ಲ. 2020ರೊಳಗೆ ಮಾನವ ರಹಿತ ರೈಲ್ವೆ ಕ್ರಾಸಿಂಗ್. 4 ಪ್ರಮುಖ ಉದ್ದೇಶಗಳೊಂದಿಗೆ ರೈಲ್ವೆ ಅಭಿವೃದ್ಧಿ. ಆನ್ ಲೈನ್ ರೈಲು ಟಿಕೆಂಟ್ ಬುಕ್ಕಿಂಗ್ ಗೆ ಸೇವಾದರ ಇಲ್ಲ.
12:01 PMರೈಲ್ವೆ ಸುರಕ್ಷತೆಗೆ 1 ಲಕ್ಷ ಕೋಟಿ, ಈ ಸಾಲಿನಲ್ಲಿ ಹೆಚ್ಚುವರಿ 5000 ಪಿಜಿ ಸೀಟ್ಸ್. 600 ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ. ಹಿರಿಯ ನಾಗರಿಕರಿಗೆ ಆರೋಗ್ಯ ಕಾರ್ಡ್ ಗಳ ವಿತರಣೆ.
11:59 AMಪರಿಶಿಷ್ಟ ಜಾತಿಗೆ 53ಸಾವಿರ ಕೋಟಿ ಅನುದಾನ. ಕೌಶಲಾಭಿವೃದ್ಧಿಗಾಗಿ 100 ಕೇಂದ್ರಗಳ ಸ್ಥಾಪನೆಗೆ ನಿರ್ಧಾರ. ಕೃಷಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ನಿರ್ಧಾರ. ದೇಶದ ಪ್ರತಿ ಹಳ್ಳಿಯಲ್ಲಿಯೂ ಶೌಚಾಲಯ ನಿರ್ಮಾಣ.
11:56 AMಹೆಚ್ಚು ಕಾಲೇಜುಗಳಿಗೆ ಸ್ವಾಯತ್ತೆ ನೀಡಲು ನಿರ್ಧಾರ. ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ 10 ಗುರಿ. ರೈತರ ಪ್ರಗತಿ, ಯುವಶಕ್ತಿ ಬಲವರ್ಧನೆ, ಡಿಜಿಟಲ್ ಇಂಡಿಯಾ, ಸಾರ್ವಜನಿಕ ಸೇವೆ, ದುಂದುವೆಚ್ಚಕ್ಕೆ ಕಡಿವಾಣ ಸೇರಿ 10 ಅಂಶಗಳತ್ತ ಚಿತ್ತ.
11:54 AMಹಿರಿಯ ನಾಗರಿಕರಿಗೆ ಪಿಂಚಣಿ, ವಿದ್ಯುತ್ ಯೋಜನೆಗೆ 4500 ಕೋಟಿ ರೂಪಾಯಿ. ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ.ಶಾಲೆಗಳಲ್ಲಿ ಕಲಿಕೆಗೆ ಹೊಸ ಸುಧಾರಿತ ವ್ಯವಸ್ಥೆ. ಗ್ರಾಮೀಣ ಶಿಕ್ಷಣಕ್ಕಾಗಿ ತಂತ್ರಜ್ಞಾನದ ಅಳವಡಿಕೆ.
11:52 AMದೇಶದಲ್ಲಿ ಒಂದೂವರೆ ಲಕ್ಷ ಉಪ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ ಏರಿಕೆ. ದೇಶದ 5 ಕಡೆ ಪ್ರವಾಸೋದ್ಯಮ ವಲಯ ಸ್ಥಾಪನೆ. ಆಧಾರ್ ಕಾರ್ಡ್ ಆಧಾರಿತ ಆರೋಗ್ಯ ಕಾರ್ಡ್ ಯೋಜನೆ.
11:51 AMಸಿಬಿಎಸ್ ಸಿ ಪ್ರವೇಶ ಪರೀಕ್ಷೆ ಇಲ್ಲ. ಹನಿ ನೀರಾವರಿಗೆ 500 ಕೋಟಿ ರೂಪಾಯಿ. ಜಾರ್ಖಂಡ್, ಗುಜರಾತ್ ನಲ್ಲಿ ಏಮ್ಸ್ ಸ್ಥಾಪನೆ. 2025ರೊಳಗೆ ಕ್ಷಯರೋಗ ನಿರ್ಮೂಲನೆಗೆ ಗುರಿ.
11:49 AM1 ಕೋಟಿ ಕುಟುಂಬಗಳಿಗೆ ಅಂತ್ಯೋದಯ ಯೋಜನೆ. ಗರ್ಭಿಣಿಯರಿಗೆ 6 ಸಾವಿರ ರೂಪಾಯಿ ಸಹಾಯಧನ. ನೇರವಾಗಿ ಗರ್ಭಿಣಿಯರ ಖಾತೆಗೆ ಹಣ. 14 ಲಕ್ಷ ಅಂಗನವಾಡಿಗಳ ಸ್ಥಾಪನೆ. ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ.
11:48 AMಮಣ್ಣಿನ ಗುಣಮಟ್ಟ ಪರೀಕ್ಷಾ ಕೇಂದ್ರಗಳ ಸ್ಥಾಪನೆ. 1.87 ಲಕ್ಷ ಕೋಟಿ ಗ್ರಾಮೀಣದ ಅಭಿವೃದ್ಧಿಗೆ ಬಳಕೆ. ರಾಷ್ಟ್ರೀಯ ಗುಣಮಟ್ಟ ಅಕಾಡೆಮಿ ಸ್ಥಾಪನೆ ಯೋಜನೆ.
11:46 AM2018ರ ವೇಳೆಗೆ ಹಳ್ಳಿ, ಹಳ್ಳಿಗೂ ವಿದ್ಯುತ್ ಯೋಜನೆ ಗುರಿ. ನೀರಾವರಿ ಯೋಜನೆಗೆ 20 ಸಾವಿರ ಕೋಟಿ ರೂಪಾಯಿ. ಗ್ರಾಮೀಣ ರಸ್ತೆ ಅಭಿವೃದ್ಧಿಗೆ 27 ಸಾವಿರ ಕೋಟಿ ರೂಪಾಯಿ ವಿನಿಯೋಗ.
11:45 AMನರೇಗಾ ಯೋಜನೆಗೆ 48 ಸಾವಿರ ಕೋಟಿ ರೂಪಾಯಿ ಅನುದಾನ. ಗ್ರಾಮೀಣ ಪ್ರದೇಶದ ಸ್ಥಳೀಯ ಸಂಶೋಧನಾ ಪ್ರತಿಭೆಗಳಿಗೆ ಅವಕಾಶ. ಆನ್ ಲೈನ್ ಶಿಕ್ಷಣಕ್ಕೆ ಒತ್ತು. 350 ಹೊಸ ಕೋರ್ಸ್.
11:44 AM2019ರ ಅಂತ್ಯಕ್ಕೆ ಗ್ರಾಮಗಳಲ್ಲಿ 1 ಕೋಟಿ ಮನೆಗಳ ನಿರ್ಮಾಣದ ಗುರಿ. ಪ್ರಧಾನಮಂತ್ರಿ ಅವಾಜ್ ಯೋಜನೆಗೆ 28 ಸಾವಿರ ಕೋಟಿ ರೂಪಾಯಿ. ಗ್ರಾಮಗಳ ಅಭಿವೃದ್ಧಿಗೆ 3 ಲಕ್ಷ ಕೋಟಿ ರೂಪಾಯಿ.
11:41 AMಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಒತ್ತು. ಹಾಲು ಉತ್ಪಾದನೆ ನಿಧಿಯಲ್ಲಿ ಹೆಚ್ಚಳ. 2018ರೊಳಗೆ ಗ್ರಾಮೀಣ ಪ್ರದೇಶದಲ್ಲಿ ಶೇ.100ರಷ್ಟು ವಿದ್ಯುತ್ ಪೂರೈಕೆ.
11:40 AM1 ಕೋಟಿ ಮನೆಗಳ ನಿರ್ಮಾಣದ ಗುರಿ. 50 ಸಾವಿರ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಮನ್ನಣೆ. 28 ಸಾವಿರ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ. ಡಿಜಿಟಲ್ ಇಂಡಿಯಾಗೆ ಒತ್ತು.
11:39 AMಯುವಶಕ್ತಿ ಬಲವರ್ಧನೆ, ಮೂಲಭೂತ ವ್ಯವಸ್ಥೆಗೆ ಆದ್ಯತೆ.ಬಡವರ ಅಭ್ಯುದಯ, ಹಳ್ಳಿಗಳ ಅಭಿವೃದ್ಧಿ ಕೇಂದ್ರದ ಗುರಿ. ಹೈನುಗಾರಿಕೆ ಅಭಿವೃದ್ಧಿಗೆ 8 ಸಾವಿರ ಕೋಟಿ. ಗ್ರಾಮೀಣ ಪ್ರದೇಶಗಳ 1 ಕೋಟಿ ಕುಟುಂಬಗಳ ಬಡತನ ನಿರ್ಮೂಲನೆ.
11:37 AMರೈತರಿಗೆ 10 ಲಕ್ಷ ಕೋಟಿ ರೂಪಾಯಿ ಸಾಲ ಸೌಲಭ್ಯದ ಗುರಿ. ಡಿಸೆಂಬರ್ 31ಕ್ಕೆ ಪ್ರಧಾನಿ ಮೋದಿ ಅವರಿಂದ ಹಲವು ಯೋಜನೆಗಳ ಘೋಷಣೆಯಾಗಿದೆ.
11:36 AMಜಿಡಿಪಿ ದರದಲ್ಲಿ ಹೆಚ್ಚಳವಾಗುತ್ತದೆ, ಪ್ರಗತಿ ಸಾಧ್ಯವಾಗಲಿದೆ. ದಾಸ್ಯದ ದಿನಗಳ ಸಂಪ್ರದಾಯವ್ನು ಕೈಬಿಡಲಾಗಿದೆ. ಜಿಎಸ್ ಟಿ ಜಾರಿ ಬಳಿಕ ದೇಶದ ಪ್ರಗತಿ ವೇಗವಾಗಿ ಬೆಳೆಯಲಿದೆ. ಭಾರತದ ಮುಂದಿನ ಗುರಿ ಟಿಎಫ್ ಸಿ ಇಂಡಿಯಾ ಯೋಜನೆ
11:34 AMಭಾರತದ ಮುಂದಿನ ಗುರಿ ಟೆಕ್ ಇಂಡಿಯಾ ಯೋಜನೆ. ಫಲಸ್ ಭೀಮಾ ಯೋಜನೆಯೂ ಸಹ ರೈತರಿಗೆ ನೆರವು. ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ ರೂ.
11:33 AMಇನ್ನು ಮೂರು ವರ್ಷಗಳಲ್ಲಿ ರಾಜ್ಯ ಸರಕಾರಗಳ ಹಣಕಾಸು ಸಹಯೋಗದೊಂದಿಗೆ ಸಹಕಾರಿ ಬ್ಯಾಂಕುಗಳ ಕಂಪ್ಯೂಟರೀಕರಣ ಹಾಗೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿಯಲ್ಲಿ ತರುವ ಪ್ರಯತ್ನಗಳು ಸಾಗಿವೆ.
11:33 AMರೈತರು ಉತ್ತಮ ಬೆಳೆಯನ್ನು ಬೆಳೆಯಲು ಸರಿಯಾದ ಸಮಯದಲ್ಲಿ ಸಾಲ ಸೌಲಭ್ಯ ಲಭ್ಯವಾಗಬೇಕು. ಹಿಂದುಳಿದ ಭಾಗದ ರೈತರಿಗೆ ಸಾಲಸೌಲಭ್ಯ ಸಿಗುವಂತೆ ನಮ್ಮ ಗಮನವನ್ನು ಹರಿಸಿದ್ದೇವೆ. ಇದರಲ್ಲಿ ಈಶಾನ್ಯ ಭಾರತದ ಭಾಗಗಳೂ ಸೇರಿವೆ.
11:32 AMಮಹಾತ್ಮಗಾಂಧಿ ಹೇಳಿಕೆ ಉಲ್ಲೇಖಿಸಿದ ಅರುಣ್ ಜೇಟ್ಲಿ. ಕೃಷಿ ಕ್ಷೇತ್ರದ ಅತ್ಯುತ್ತಮ ಪ್ರಗತಿಯಲ್ಲಿ ಭಾರತವಿದೆ. ಆರ್ಥಿಕವಾಗಿ ಅತೀ ವೇಗದಲ್ಲಿ ಭಾರತ ಬೆಳೆಯುತ್ತಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಕೇಂದ್ರದ ನೆರವು.
11:30 AMನೋಟು ನಿಷೇಧದ ಲಾಭ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಸಿಗಲಿದೆ. ಆರ್ಥಿಕ ಸ್ಥಿತಿ ಅಭಿವೃದ್ಧಿಗೆ ನೋಟು ನಿಷೇಧ ಪೂರಕ. ಬೆಳವಣಿಗೆ ಹಾಗೂ ಅಭಿವೃದ್ಧಿ ಹಾದಿಯಲ್ಲಿ ಕೇಂದ್ರ ಸರ್ಕಾರವಿದೆ.
11:29 AMಜಿಎಸ್ ಟಿ ಕೌನ್ಸಿಲ್ ಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸಲಾಗಿದೆ. ನೋಟು ನಿಷೇಧ ಕೇಂದ್ರ ಸರ್ಕಾರದ ಸಾಧನೆ ಎಂದು ಬಣ್ಣನೆ. ನೋಟು ನಿಷೇಧದ ನಿರ್ಧಾರದಿಂದ ಬ್ಯಾಂಕ್ ಗಳಲ್ಲಿ ಸಾಲ ಕಡಿಮೆಯಾಗಿದೆ.
11:27 AMಅಮಾನ್ಯೀಕರಣದ ಲಾಭ ದೇಶದಲ್ಲಿ ಈಗಾಗಲೇ ಕಾಣುತ್ತಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಹೆಚ್ಚಿನ ಬಂಡವಾಳ ಹೂಡಿಕೆ. ಉತ್ತಮ ಉದ್ದೇಶ ಎಂದಿಗೂ ಸಹ ವೈಫಲ್ಯ ಆಗುವುದಿಲ್ಲ.
11:26 AMಎಫ್ ಡಿಎ ನೀತಿಗಳಲ್ಲಿ ಮಹತ್ವದ ಬದಲಾವಣೆ. ಆರ್ಥಿಕ ಸುಧಾರಣೆಗೆ ಜಿಎಸ್ ಟಿ ಜಾರಿ. ಟೆಕ್ ಇಂಡಿಯಾಕ್ಕೆ ಒತ್ತು. ಮೂರು ಪ್ರಮುಖ ಸುಧಾರಣೆಗಳ ಘೋಷಣೆ.
11:25 AMಬಡರಿಗೆ ವಸತಿ ಸೌಲಭ್ಯಕ್ಕೆ ಕ್ರಮ, 2017ರ ಜಿಡಿಪಿ ದರ ಶೇ.7.2ರಷ್ಟು. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಬಂಡವಾಳ. ಮೂಲಭೂತ ಸೌಕರ್ಯಕ್ಕೆ, ಬಡತನ ನಿರ್ಮೂಲನೆಗೆ ಹೆಚ್ಚಿನ ಒತ್ತು.
11:23 AMನೋಟು ನಿಷೇಧದ ನಂತರ ದೇಶದಲ್ಲಿ ಆರ್ಥಿಕ ಕ್ರಾಂತಿಯಾಗಿದೆ. ನೋಟು ನಿಷೇಧ ದೇಶದ ಅರ್ಥವ್ಯವಸ್ಥೆಗೆ ಭವಿಷ್ಯದಲ್ಲಿ ಲಾಭದಾಯಕವಾಗಲಿದೆ.
11:22 AMಜಗತ್ತಿನ 6ನೇ ಅತಿ ದೊಡ್ಡ ಆರ್ಥಿಕ ಶಕ್ತಿ ಹೊಂದಿದ ದೇಶ ಭಾರತವಾಗಿದೆ. ವಿದೇಶಿ ಬಂಡವಾಳದ ಹೂಡಿಕೆ ಶೇ.36ರಷ್ಟು ಹೆಚ್ಚಳವಾಗಿದೆ. ದೇಶದ ವಿದೇಶಿ ವಿನಿಮಯ ಹೆಚ್ಚಳವಾಗಿದೆ.
11:20 AMವಸಂತ ಪಂಚಮಿ ದಿನ ಬಜೆಟ್ ಮಂಡನೆ ಆರಂಭಿಸಿದ್ದೇನೆ. ದೇಶದ ಅರ್ಥವ್ಯವಸ್ಥೆಯ ಮೇಲೆ ಅಮೆರಿಕ ಚುನಾವಣೆಯ ಪ್ರಭಾವವೂ ಇದೆ. ಜಗತ್ತಿನ ಆರ್ಥಿಕ ಪ್ರಗತಿ ದೇಶದ ಅಭಿವೃದ್ಧಿ ಅವಲಂಬಿತವಾಗಿದೆ.
11:18 AMಬಜೆಟ್ ಅನ್ನು ಬಡವರಿಗೆ ತಲುಪಿಸುವುದೇ ನಮ್ಮ ಗುರಿ. ನಮ್ಮ ಅವಧಿಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದಿದೆ. ದೇಶದಲ್ಲಿ ಕಪ್ಪು ಹಣ ನಿಯಂತ್ರಿಸಿದ್ದೇವೆ. ಈ ವರ್ಷ ಎಲ್ಲಾ ಆರ್ಥಿಕ ವಲಯ ಚೇತರಿಕೆ ಕಾಣಲಿದೆ.
11:17 AMನೋಟು ನಿಷೇಧದ ನಂತರ ಮೊದಲ ಬಾರಿಗೆ ಬಜೆಟ್ ಮಂಡನೆ. ಕಳೆದ ವರ್ಷ ಜಿಡಿಪಿ ದರದಲ್ಲಿ ವೃದ್ಧಿ. ಉದ್ಯೋಗ ಕ್ಷೇತ್ರದಲ್ಲಿ ಬಲವರ್ಧನೆ ನಮ್ಮ ಗುರಿ. ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ.
11:15 AM4ನೇ ಕೇಂದ್ರ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವ ಜೇಟ್ಲಿ. ನಮ್ಮ ಅವಧಿಯಲ್ಲಿ ಎರಡಂಕೆಯ ಹಣದುಬ್ಬರ ನಿಯಂತ್ರಣ. ಸಾರ್ವಜನಿಕ ಹಣವನ್ನು ಸದುಪಯೋಗಪಡಿಸಲು ಕ್ರಮ.
11:13 AMಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಫೆ.1ರಂದು ಬಜೆಟ್ ಮಂಡಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್ ನಲ್ಲಿ ವಿಲೀನ.
11:11 AMವಿಪಕ್ಷಗಳ ಗದ್ದಲದ ನಡುವೆಯೇ ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಸ್ಪೀಕರ್ ಸುಮಿತ್ರಾ ಮಹಾಜನ್ ಬಜೆಟ್ ಮುಂದೂಡಬೇಕೆಂಬ ಮನವಿಯನ್ನು ತಿರಸ್ಕರಿಸಿದ್ದಾರೆ.
11:08 AMಲೋಕಸಭಾ ಕಲಾಪ ಆರಂಭ. 79 ವರ್ಷದ ಇ ಮಹಮ್ಮದ್ ನಿಧನಕ್ಕೆ ಲೋಕಸಭೆಯಲ್ಲಿ ಮೌನ ಸಂತಾಪ ಸೂಚಿಸಲಾಯಿತು. ಆದರೆ ಸ್ಪೀಕರ್ ಬಜೆಟ್ ಮಂಡನೆ ಅನಿವಾರ್ಯ ಎಂದು ಹೇಳುತ್ತಿದ್ದಂತೆಯೇ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದವು.
10:58 AMಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ. ಇನ್ನು ಕೆಲವೇ ಕ್ಷಣದಲ್ಲಿ ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭವಾಗಲಿದೆ.
10:46 AMಬಜೆಟ್ ಮಂಡನೆ ಸಾಂವಿಧಾನಿಕ ಜವಾಬ್ದಾರಿ. ಹಾಗಾಗಿ ಇಂದೇ 11ಗಂಟೆಗೆ ಸಂಸತ್ ನಲ್ಲಿ ಬಜೆಟ್ ಮಂಡನೆಯಾಗಲಿದೆ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸ್ಪಷ್ಟಪಡಿಸಿದ್ದಾರೆ.
10:44 AMಬಜೆಟ್ ಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ವಿತ್ತ ಸಚಿವರು, ನಾನು ಬುಧವಾರ 2017-18ನೇ ಸಾಲಿನ ಬಜೆಟ್ ಅನ್ನು ಮಂಡಿಸುತ್ತಿದ್ದೇನೆ. ಅದೇ ರೀತಿ ನೀವು ನನಗೆ ನೇರವಾಗಿ ಪ್ರಶ್ನೆಗಳನ್ನು ಕೇಳಬಹುದು, ಅದಕ್ಕೆ ಉತ್ತರ ಕೊಡಲು ನನಗೆ ತುಂಬಾ ಸಂತಸದ ವಿಷಯವಾಗಿದೆ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
10:27 AMನಿಗದಿಯಂತೆ 11ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ಇದರಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡುವ ಮೂಲಕ ಅನುಮಾನಕ್ಕೆ ತೆರೆ ಎಳೆದಿದ್ದಾರೆ.
10:26 AM2017ನೇ ಸಾಲಿನ ಬಜೆಟ್ ಮಂಡನೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ. ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನಕ್ಕೆ ಆಗಮನ. ಪ್ರಧಾನಿ ನೇತೃತ್ವದಲ್ಲಿ ಸಂಪುಟ ಸಭೆ ಆರಂಭವಾಗಲಿದೆ.
10:15 AMಸಂಸದ ಇ ಅಹ್ಮದ್ ನಿಧನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ, ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಬಜೆಟ್ ಇವತ್ತು ಮಂಡಿಸಬಾರದು ಎಂದು ವಿತ್ತ ಸಚಿವರಲ್ಲಿ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
10:12 AMಸೂಟ್ ಕೇಸ್ ಜೊತೆ ಸಂಸತ್ ಭವನಕ್ಕೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಆಗಮಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ.
10:08 AMಬಜೆಟ್ ಪ್ರತಿಗಳು ಈಗಾಗಲೇ ಸಂಸತ್ ಗೆ ಬಂದು ತಲುಪಿವೆ. ನಿಗದಿಯಂತೆ ಬೆಳಗ್ಗೆ 11ಗಂಟೆಗೆ ಬಜೆಟ್ ಮಂಡಿಸಲು ಸರ್ವಪಕ್ಷಗಳು ಸಮ್ಮತಿ ಸೂಚಿಸಿವೆ ಎಂದು ವರದಿ ವಿವರಿಸಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ

01/02/2017

Best of luck Raksh*t Shetty
27/12/2016

Best of luck
Raksh*t Shetty

One time it was place of slum and dirty.. Few months back a garden came.. Now walls Painted with Beautiful Meaningful Pa...
25/12/2016

One time it was place of slum and dirty.. Few months back a garden came.. Now walls Painted with Beautiful Meaningful Painting... Just wow.! Kudos to Auto Rikshaw Drivers who took initiative... Lets make our city clean and beautiful..
Via

ಕೈತುಂಬ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಸೇನೆ ಸೇರಿದ ಕರಾವಳಿಯ ಬೆಡಗಿಮಂಗಳೂರು: ಆಕೆ ಮನಸ್ಸು ಮಾಡಿದರೆ ಆರಂಕಿ ವೇತನದ ಉದ್ಯೋಗದ ಜೊತೆಗೆ ಹಾಯಾಗಿ...
21/12/2016

ಕೈತುಂಬ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಸೇನೆ ಸೇರಿದ ಕರಾವಳಿಯ ಬೆಡಗಿ
ಮಂಗಳೂರು: ಆಕೆ ಮನಸ್ಸು ಮಾಡಿದರೆ ಆರಂಕಿ ವೇತನದ ಉದ್ಯೋಗದ ಜೊತೆಗೆ ಹಾಯಾಗಿ ಕಾಲಕಳೆಯಬಹುದಿತ್ತು. ಆದರೆ ಬಾಲ್ಯದಿಂದಲೇ ತಾನು ಸೇನೆ ಸೇರಬೇಕೆಂಬ ತುಡಿತದಿಂದಾಗಿ ಆಕೆಗೆ ಯಾವ ಹುದ್ದೆಯೂ ಆಕರ್ಷಣೀಯವಾಗಿ ಕಾಣಲಿಲ್ಲ.

ಕೊನೆಗೂ ಆಕೆ ಬಯಸಿದ್ದನ್ನು ಸಾಧಿಸಿಯೇ ಬಿಟ್ಟಳು. ಭಾರತೀಯ ನೌಕಾದಳದಲ್ಲಿ ಏವಿಯೇಶನ್ ಸ್ಪೆಶಲೈಸೇಶನ್ ಅಬ್ಸರ್ವರ್ ಆಫೀಸರ್ ಆಗಿ ತನ್ನ ಕನಸನ್ನು ನನಸು ಮಾಡಿಯೇ ಬಿಟ್ಟಳು. ಹೌದು ಮಂಗಳೂರಿನ ಬೋಳೂರು ಎಂಬ ಚಿಕ್ಕ ಊರಿನ ಹೆಣ್ಣು ಮಗಳ ಯಶೋಗಾಥೆ ಇದು.

ಮಂಗಳೂರಿನ ಬೋಳೂರು ಎಂಬ ಚಿಕ್ಕ ಊರು ದೇಶದ ರಕ್ಷಣಾ ನಕ್ಷೆಯಲ್ಲಿ ಹೆಸರು ಮೂಡಿಸಿದರೆ, ಈ ಊರಿನ ಯುವತಿ ದಿಶಾ ಅಮೃತ್ ಇಡೀ ಹೆಣ್ಮಕ್ಕಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಸಾಮಾನ್ಯವಾಗಿ ಯುದ್ಧಗಳಾದಾಗಷ್ಟೇ ಸೈನಿಕರ ತ್ಯಾಗ, ಬಲಿದಾನಗಳು ಒಂದೆರಡು ದಿನ ಮನಸ್ಸನ್ನು ಕಲಕುತ್ತದೆ. ಅಲ್ಲಿಗೆ ದೇಶಾಭಿಮಾನ ತಣ್ಣಗಾಗುತ್ತದೆ. ಆದರೆ, ದಿಶಾ ಹಾಗಲ್ಲ. ಬಾಲ್ಯದಿಂದಲೇ ಸೇನೆ ಸೇರುವ ಕನಸನ್ನು ಹೊತ್ತುಕೊಂಡವರು. ಆ ಕನಸಿಗಾಗಿ ಶ್ರಮಪಟ್ಟವರು. ಅಮೃತ್-ಲೀಲಾ ದಂಪತಿಯ ಇಬ್ಬರು ಹೆಣ್ಣಮಕ್ಕಳಲ್ಲಿ ದಿಶಾ ಕೊನೆಯವರು. ಬಾಲ್ಯದಲ್ಲೇ ಪ್ರತಿಭಾವಂತೆ.

ಮಂಗಳೂರು ಕೆನರಾ ಹೆಣ್ಮಕ್ಕಳ ಶಾಲೆಯಲ್ಲಿ ಓದುತ್ತಿರುವಾಗಲೇ ಎನ್‌‌‌ಸಿಸಿ ರುಚಿ ಹಚ್ಚಿಸಿಕೊಂಡರು. ದಿಲ್ಲಿಯಲ್ಲಿ ಗಣರಾಜ್ಯೋತ್ಸವ ಪೆರೇಡ್‌‌ನಲ್ಲಿ ಭಾಗವಹಿಸಿದವರು. ಅಲ್ಲಿ ಬಂದಿದ್ದ ಲೆಫ್ಟಿನೆಂಟ್‌‌ಗಳು, ಅವರು ಅಲಂಕರಿಸಿದ ಪದಕಗಳ ಜೊತೆಗಿನ ಸಮವಸ್ತ್ರಗಳನ್ನು ಕಂಡಾಗ ಆಕೆ ತಾನೂ ಸೇನೆ ಸೇರಬೇಕೆಂದು ನಿಶ್ಚಯಿಸಿದ್ದರಂತೆ.

ದಿಶಾ ತಂದೆ ಅಮೃತ್ ಅವರೂ ಕೂಡ ತಾವೂ ಸೇನೆಯಲ್ಲಿರಬೇಕೆಂದು ಆಸೆಪಟ್ಟಿದ್ದರಂತೆ ಆದರೆ, ತನ್ನಾಸೆ ಕೈಗೂಡದೇ ಹೋದಾಗ ಮಕ್ಕಳಾದರೂ ದೇಶದ ರಕ್ಷಣೆಯಲ್ಲಿ ತೊಡಗಲಿ ಎಂದು ಬಯಸಿದ್ದರು. ಹೀಗಾಗಿ ತಮ್ಮ ಕನಸನ್ನು ಮಗಳ ಮೂಲಕ ಸಾಧಿಸಿದ್ದಾರೆ ಅಮೃತ್‌.

ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿರುವ ದಿಶಾ ಯುನಿಸೆಸ್ ಕಂಪೆನಿಯಲ್ಲಿ ನೌಕರಿ ಪಡೆದರು. ಕೈತುಂಬಾ ಉತ್ತಮ ವೇತನವನ್ನೂ ಪಡೆಯುತ್ತಿದ್ದರು. ಈ ನಡುವೆ ತಾನು ಭೂಸೇನೆಗೆ ಸೇರುವಾಸೆಯಿಂದ ಐದು ಬಾರಿ ಪರೀಕ್ಷೆ ಬರೆದಿದ್ದರು. ಇರುವ ಮೂರು ಹುದ್ದೆಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದಾಗ ಪ್ರಧಾನಿಗೆ ಪತ್ರ ಬರೆದರು. ತನ್ನಂತಹ ಯುವತಿಯರು ದೇಶ ಸೇವೆಗೆ ತುಡಿಯುತ್ತಿರುವಾಗ ಹುದ್ದೆಗಳನ್ನು ಹೆಚ್ಚುಮಾಡಿ ಎಂದು ವಿನಂತಿಸಿಕೊಂಡರು.

ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಮಂತ್ರಿ ಕಚೇರಿ ಅಧಿಕಾರಿಗಳು ಪತ್ರವನ್ನು ರಕ್ಷಣಾ ಇಲಾಖೆಗೆ ರವಾನಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿತು. ಪತ್ರದ ಬಳಿಕ ಒಂದು ಹುದ್ದೆಯನ್ನು ಹೆಚ್ಚಿಸಿತು. ಆ ಬಳಿಕವೂ ದಿಶಾಗೆ ಅವಕಾಶ ದೊರಕಲಿಲ್ಲ. ಹನ್ನೊಂದನೆ, ಹದಿನೈದನೆ ಶ್ರೇಣಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.

ಅದೊಂದು ದಿನ ಭೂಸೇನೆಯಲ್ಲಿ ತನಗೆ ಹುದ್ದೆ ನಿರಾಕರಿಸಿದ ಪತ್ರ ಬಂದರೆ ನೌಕಾದಳದಲ್ಲಿ ಪರೀಕ್ಷೆಗೆ ಬುಲಾವ್ ಬಂದಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿದ ದಿಶಾ ಗೆದ್ದೇ ಬಿಟ್ಟರು. ಈ ಮೂಲಕ ನೌಕಾದಳಕ್ಕೆ ದಕ್ಷಿಣ ಭಾರತದಲ್ಲೇ ಆಯ್ಕೆಯಾದ ಏಕೈಕ ಹೆಣ್ಮಗಳು ಎಂಬ ಹಿರಿಮೆಗೆ ಪಾತ್ರಳಾಗಿದ್ದಾಳೆ.

ಡಿಸೆಂಬರ್ 24ರಂದು ದಿಶಾ ನೌಕಾದಳದತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಅಲ್ಲಿ ಆರು ತಿಂಗಳು ತರಬೇತಿ ಪಡೆಯಲಿದ್ದಾರೆ. ಅನೇಕ ಉದ್ಯೋಗಗಳು ನಮ್ಮ ಕಣ್ಣಮುಂದೆ ಇರಬಹುದು. ಆದರೆ, ದೇಶ ಸೇವೆಯಿಂದ ಸಿಗುವ ಧನ್ಯತಾ ಭಾವ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ತಾನು ಅದೃಷ್ಟವಂತೆ ಎಂದು ಬೀಗುವ ದಿಶಾ ಮಾದರಿ ಹೆಣ್ಣು.
Via

*2020 - 2024 ರ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕದ ಅಚ್ಚೇ ದಿನ್**ಹೌದು,*ಭಾರತೀಯರಾದ ನಾವೆಲ್ಲರೂ ಹಿಂದೆ ಓಲಂಪಿಕ್ಸ್ ಬಂತೆಂದರೆ ಹುಚ್ಚೆದ್ದು ...
16/12/2016

*2020 - 2024 ರ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕದ ಅಚ್ಚೇ ದಿನ್*

*ಹೌದು,*
ಭಾರತೀಯರಾದ ನಾವೆಲ್ಲರೂ ಹಿಂದೆ ಓಲಂಪಿಕ್ಸ್ ಬಂತೆಂದರೆ ಹುಚ್ಚೆದ್ದು ಕುಣಿದು ಸಂಭ್ರಮ ಪಟ್ಟು ಕೊನೆಗೆ ಭಾರತಕ್ಕೆ ಪದಕ ದಕ್ಕದ ನಿರಾಸೆಯಲ್ಲಿ ನಾವೆಲ್ಲರೂ ಇರುತ್ತಿದ್ದೆವು. ಆದರೆ ಇಂದು ಬದಲಾಗುತ್ತಿರುವ ಸನ್ನಿವೇಶದಲ್ಲಿ *2020 - 2024* ರ ಓಲಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಸನಿಹದಲ್ಲಿ ನಾವಿದ್ದೇವೆ. ಇದಕ್ಕೆ ಕಾರಣ ಹಿಂದೆ ವಿದೇಶದಲ್ಲಿ ಹತ್ತು - ಹದಿನೈದು - ಇಪ್ಪತ್ತು ವರ್ಷಗಳ ತರಬೇತಿ ನೀಡಿ ಸಜ್ಜುಗೊಳಿಸುತ್ತಿದ್ದುದನ್ನು ನಾವು ಕಾಣುತ್ತಿದ್ದೇವು. ಆದರೆ ಇಂದು ಭಾರತದಲ್ಲಿ ಆ ಕನಸ್ಸು ನನಸ್ಸಾಗುವ ಕಾಲ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೂಲಕ ನಡೆಯುತ್ತಿದೆ. Yes, *2020 -2024* ಓಲಂಪಿಕ್ಸ್ ನಲ್ಲಿ ಪ್ರಧಾನಿ ಮೋದಿಯವರ ಆಶಯದಂತೆ ಭಾರತದ ಕ್ರೀಡಾಳುಗಳನ್ನು ಜಗತ್ತಿನಲ್ಲಿ ಭೂಪಟದಲ್ಲಿ ಗುರುತಿಸುವ ಕಾರ್ಯ ನಡೆಯುತ್ತಿದೆ. *2020 - 2024*ರ ಓಲಂಪಿಕ್ಸ್ ಗೆ ಆಯ್ಕೆ ಪ್ರಕ್ರಿಯೆಯು ನಡೆಯುತ್ತಿರುವುದು ಗಮನಾರ್ಹ. ಇದಕ್ಕೆ ಇಂದಿನ ದಿವಸಗಳಲ್ಲಿ ಚಾಲನೆ ಸಿಕ್ಕಿದ್ದು ಬರುವ ದಿನಾಂಕ *18.12.2016* ರ ಭಾನುವಾರದಂದು *ಮಂಗಳೂರಿನ ಮಂಗಳಾ ಕ್ರೀಡಾಂಗಣ*ದಲ್ಲಿ ಆಯ್ಕೆ ಪ್ರಕ್ರೀಯೆಯು *ಬಾಲಕ/ಬಾಲಕಿಯರಿ*ಗೆ ನಡೆಯುತ್ತಿದ್ದು 11-14 (01.01.2003 ರಿಂದ 31.12.2005) ಹಾಗೂ 15-17 (01.01.2000ರಿಂದ 31.12.2002 ) ರೊಳಗೆ ಜನಿಸಿರುವ ವಯೋಮಾನದ ಕ್ರೀಡಾಳುಗಳಿಗೆ *100mtrs, 200mtrs & 400 Mtrs* ಓಟವು ನಡೆಯಲಿದೆ. ಭಾಗವಹಿಸುವ ಕ್ರೀಡಾಳುಗಳು *ಒಂದು ಪಾಸ್ ಪೋರ್ಟ್ ಸೈಸ್ ಪೊಟೋ, ಜನ ಪ್ರಮಾಣ ಪತ್ರದ ನಕಲು ಪ್ರತಿ ಹಾಗೂ ಆಧಾರದ ಕಾರ್ಡ್ ನಕಲು ಪ್ರತಿ* ತರಬೇಕು. ಈಗಾಗಲೇ ಹಲವು ಮಂದಿ ಕ್ರೀಡಾಳುಗಳು ನೋಂದಣಿ ಮಾಡಿದ್ದು ನೋಂದಣಿ ಮಾಡದೇ ಇರುವ ಕ್ರೀಡಾಪಟುಗಳು ಸ್ಥಳದಲ್ಲೇ ನೋಂದಣಿ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಇಲ್ಲಿ ಆಯ್ಕೆಯಾದ ಕ್ರೀಡಾಳುಗಳನ್ನು ವಲಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ವಲಯ ಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳನ್ನು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿರುವ ಕ್ರೀಡಾಳುಗಳನ್ನು ಮುಂದಿನ ಓಲಂಪಿಕ್ಸ್ ಗೆ ತಯಾರು ಮಾಡುವ ಸಂಪೂರ್ಣ ಹೊಣೆಯನ್ನು ಭಾರತ ಸರಕಾರವು ವಹಿಸಿಕೊಳ್ಳುತ್ತದೆ. ವಲಯ & ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಂಡಿರುವ ಕ್ರೀಡಾಳುಗಳ ಪ್ರಯಾಣ ಭತ್ಯೆ ಮತ್ತು ಸಂಪೂರ್ಣ ಖರ್ಚು ವೆಚ್ಚವನ್ನು ಸರಕಾರವೇ ಭರಿಸುವುದು. ರಾಷ್ಟ್ರದ ಮಟ್ಟದಲ್ಲಿ ಆಯ್ಕೆಗೊಂಡ ಕ್ರೀಡಾಪಟುಗಳಿಗೆ ಉಚಿತ ತರಬೇತಿಯನ್ನು ಪರಿಣತ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ತರಬೇತಿದಾರರಿಂದ ದೇಶ - ವಿದೇಶಗಳಲ್ಲಿ ನೀಡುವ ವ್ಯವಸ್ಥೆಯನ್ನು ಸರಕಾರವೇ ಪೂರೈಸುತ್ತದೆ. ಈ ಅವಧಿಯಲ್ಲಿ ಶಿಕ್ಷಣ, ವಸತಿ ಹಾಗೂ ಕ್ರೀಡಾಳುಗಳ ಇನ್ನಿತರ ಸಂಪೂರ್ಣ ಖರ್ಚುವೆಚ್ಚವನ್ನು ಸರಕಾರವೇ ಭರಿಸುತ್ತದೆ. ಕೊನೆಗೆ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸುವ, ಬದಾಲಾವಣೆಯ ಪರ್ವ. ಇದುವೇ ಭಾರತೀಯ ಕ್ರೀಡಾಕ್ಷೇತ್ರದ ಅಚ್ಚೇ ದಿನ್. ಎಲ್ಲರಿಗೂ ಈ ಸಂದೇಶವನ್ನು ತಲುಪಿಸಿ ನಿಮ್ಮಿಂದ ಭಾರತ ಕ್ರೀಡಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಮುಂಚೂಣಿಗೆ ಬರಲು ಶ್ರಮಿಸೋಣ.

*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ* : 9916040445, 9620648299, 9481940275

ಮಂಗಳೂರಿನ ಕಡೆ ಯಾಕೆ ಚಂಡಮಾರುತಗಳು ಬಡಿಯೋದಿಲ್ಲ?ಭಾರತದ ಪೂರ್ವ ಕರಾವಳಿ ಭಾಗದಲ್ಲಿ(ಬಂಗಾಳ ಕೊಲ್ಲಿ) ಚಂಡಮಾರುತಗಳು ಸರ್ವೇಸಾಮಾನ್ಯ. ಮಂಗಳೂರು ಇತ್...
12/12/2016

ಮಂಗಳೂರಿನ ಕಡೆ ಯಾಕೆ ಚಂಡಮಾರುತಗಳು ಬಡಿಯೋದಿಲ್ಲ?

ಭಾರತದ ಪೂರ್ವ ಕರಾವಳಿ ಭಾಗದಲ್ಲಿ(ಬಂಗಾಳ ಕೊಲ್ಲಿ) ಚಂಡಮಾರುತಗಳು ಸರ್ವೇಸಾಮಾನ್ಯ. ಮಂಗಳೂರು ಇತ್ಯಾದಿ ಪಶ್ಚಿಮ ಕರಾವಳಿ(ಅರೇಬಿಯನ್ ಸಮುದ್ರ) ಭಾಗದಲ್ಲಿ ಚಂಡಮಾರುತಗಳು ತೀರಾ ಅಪರೂಪ. ಎರಡೂ ಕೂಡ ಕರಾವಳಿ ತೀರಗಳೇ ಆದರೂ ಚಂಡಮಾರುತದ ವಿಷಯದಲ್ಲಿ ಈ ವ್ಯತ್ಯಾಸ ಯಾಕೆ? ಮಂಗಳೂರಿನ ಕಡೆ ಯಾಕೆ ಚಂಡಮಾರುತಗಳು ಬಡಿಯೋದಿಲ್ಲ? ಎಂಬ ಪ್ರಶ್ನೆಗಳು ಮೂಡುವುದು ಸಹಜ.
ಇದಕ್ಕೆ ಎರಡು ಮೂರು ರೀತಿಯ ಉತ್ತರಗಳಿವೆ. ಜಗತ್ತಿನಾದ್ಯಂತ ಪ್ರತೀ ವರ್ಷ ಸುಮಾರು 87 ಚಂಡಮಾರುತಗಳು ನಿರ್ಮಾಣವಾಗುತ್ತವೆ. ವಿಶ್ವದ ಪ್ರಮುಖ ಭೂಭಾಗಗಳಲ್ಲಿ ಪೂರ್ವ ಕರಾವಳಿ ತೀರಗಳು ಪಶ್ಚಿಮದವಕ್ಕಿಂತ ಹೆಚ್ಚಾಗಿ ಚಂಡಮಾರುತಕ್ಕೆ ತುತ್ತಾಗುತ್ತವೆ. ಅಮೆರಿಕದಲ್ಲೂ ಪೂರ್ವಕರಾವಳಿ ಭಾಗದಲ್ಲೇ ಚಂಡಮಾರುತ(ಹುರಿಕೇನ್)ಗಳು ಹೆಚ್ಚು ಉಪದ್ರವ ಕೊಡುತ್ತವೆ. ಚಂಡಮಾರುತಗಳು ಪಶ್ಚಿಮದಿಂದ ಪೂರ್ವದ ಕಡೆಗೆ ಬೀಸುವುದರಿಂದ ಇದಕ್ಕೆ ಕಾರಣವಿರಬಹುದು.
ಅರೇಬಿಯನ್ ಸಾಗರದ ಕಡಿಮೆ ಉಷ್ಣಾಂಶ:
ಚಂಡಮಾರುತಗಳು ನಿರ್ಮಾಣವಾಗಲು ಸಮುದ್ರದ ಉಷ್ಣಾಂಶ ಮೂಲಭೂತ ಅಂಶ. ಸಮುದ್ರದ ಮೇಲ್ಮೈನಲ್ಲಿ 25-27 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶವಿದ್ದರೆ ಚಂಡಮಾರುತದ ನಿರ್ಮಾಣಕ್ಕೆ ಹೇಳಿಮಾಡಿಸಿದ ವಾತಾವರಣ ಸೃಷ್ಟಿಯಾಗುತ್ತದೆ. ಬಂಗಾಳ ಕೊಲ್ಲಿಯಲ್ಲಿ ಈ ವಾತಾವರಣವಿದೆ. ಹೀಗಾಗಿ, ಅಲ್ಲಿ ಚಂಡಮಾರುತಗಳು ಸುಲಭವಾಗಿ ನಿರ್ಮಾಣವಾಗುತ್ತವೆ.
ಚಂಡಮಾರುತಗಳ ನಿರ್ಮಾಣ ಹೇಗೆ?
ಚಂಡಮಾರುತ ನಿರ್ಮಾಣವಾಗಬೇಕಾದರೆ ಈ ಕೆಳಕಾಣಿಸಿದ ನಾಲ್ಕು ಅಂಶಗಳು ಮುಖ್ಯ.
1) ಸಮುದ್ರದ ಉಷ್ಣಾಂಶ:
ಎರಡು ಪ್ಯಾರಾಗಳ ಹಿಂದೆ ವಿವರಿಸಿದಂತೆ ಸಮುದ್ರದ ಉಷ್ಣಾಂಶವು 25-27 ಡಿಗ್ರಿ ಸೆಲ್ಷಿಯಸ್ ಇರಬೇಕು. ಇದು ತೇವಾಂಶ ಹಿಡಿದಿಡಲು ಅನುಕೂಲವಾದ ಉಷ್ಣಾಂಶವಾಗಿರುತ್ತದೆ. ಚಂಡಮಾರುತಕ್ಕೆ ಪೂರಕ ವಾತಾವರಣ ಇದಾಗಿದೆ.
2) ವಿಂಡ್ ಶೇರ್:
ಗಾಳಿಯ ವೇಗದಲ್ಲಿ ಆಗುವ ಬದಲಾವಣೆಯನ್ನು ವಿಂಡ್ ಶೇರ್ ಎನ್ನುತ್ತಾರೆ. ಸಮನಾಂತರ ರೇಖೆಯ ಮತ್ತು ಲಂಬ ರೇಖೆ ಎಂಬ ಎರಡು ರೀತಿಯ ವಿಂಡ್ ಶೇರ್'ಗಳಿವೆ. ಅಕ್ಷಾಂಶ(Latitude)ದೊಂದಿಗೆ ಗಾಳಿಯ ವೇಗದಲ್ಲಿರುವ ಬದಲಾವಣೆಯು ಸಮಾನಾಂತರ ವಿಂಡ್ ಶೇರ್ ಎನಿಸುತ್ತದೆ. ಎತ್ತರ(Altitude)ದೊಂದಿಗೆ ಗಾಳಿಯ ವೇಗ ಬದಲಾವಣೆಯನ್ನು ಲಂಬ ವಿಂಡ್ ಶೇರ್ ಎನ್ನುತ್ತಾರೆ. ತೀರಾ ಕಡಿಮೆ ಪ್ರಮಾಣದ ಲಂಬ ವೇಗ ಬದಲಾವಣೆ ಇದ್ದಾಗ ಚಂಡಮಾರುತ ಏಳುವ ಸಾಧ್ಯತೆ ಹೆಚ್ಚಿರುತ್ತದೆ. ಬಂಗಾಳ ಕೊಲ್ಲಿಯಲ್ಲಿ ಇಂತಹ ವಾತಾವರಣವಿದೆ.
3) ಹೆಚ್ಚಿನ ತೇವಾಂಶ:
ಚಂಡಮಾರುತದ ತೀವ್ರತೆ ಹೆಚ್ಚಾಗಲು ವಾತಾವರಣದ ತೇವಾಂಶದ ಪ್ರಮಾಣ ಮುಖ್ಯವಾಗುತ್ತದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಆದಾಗೆಲ್ಲಾ ಸೌಥ್ ಚೀನಾ ಸಾಗರದಲ್ಲೂ ಪ್ರಬಲ ಚಂಡಮಾರುತಗಳೆದ್ದಿರುತ್ತವೆ. ದಕ್ಷಿಣ ಚೀನಾ ಸಾಗರದಲ್ಲಿ ಏಳುವ ಚಂಡಮಾರುತದಿಂದ ಉಳಿಯುವ ತೇವಾಂಶವು ಬಂಗಾಳ ಕೊಲ್ಲಿಯನ್ನು ಸೇರಿಕೊಳ್ಳುತ್ತದೆ. ಇದು ಇಲ್ಲಿಯ ಚಂಡಮಾರುತಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.
4) ಎತ್ತರ ಪರ್ವತದ ಅನುಪಸ್ಥಿತಿ:
ಎತ್ತರದ ಪರ್ವತ ಶ್ರೇಣಿಗಳು ಗಾಳಿಯ ವೇಗವನ್ನು ತಗ್ಗಿಸುತ್ತವೆ. ಪೂರ್ವ ಕರಾವಳಿ ಭಾಗದಲ್ಲಿ ಇಂತಹ ಪರ್ವತಗಳು ತೀರಾ ಕಡಿಮೆ. ಪಶ್ವಿಮ ಕರಾವಳಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶವು ಗಾಳಿಗೆ ತಡೆಯಾಗಿ ನಿಲ್ಲುತ್ತವೆ.
ಈ ಮೇಲೆ ತಿಳಿಸಿದ ನಾಲ್ಕೂ ಅಂಶಗಳು ಪೂರ್ವಭಾಗದ ಕರಾವಳಿಯಲ್ಲಿರುವುದರಿಂದ ಅಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಾಗಿಯೇ ಇರುತ್ತದೆ. ಪಶ್ಚಿಮ ಕರಾವಳಿ ಭಾಗದಲ್ಲಿ ಚಂಡಮಾರುತ ಸಂಭವಿಸುತ್ತದಾದರೂ ತೀವ್ರತೆ ಹಾಗೂ ಪ್ರಮಾಣ ತೀರಾ ಕಡಿಮೆಯೇ.
Via

ಅಕ್ರಮ ಹಣ ಹೊಂದಿದ ಮೂವರ ಬಂಧನಪುತ್ತೂರು ಗ್ರಾಮಂತರ ಪೊಲೀಸರ ಕಾರ್ಯಾಚರಣೆ೧೮ ಲಕ್ಷ ರೂಪಾಯಿ ಹೊಂದಿದ್ದ ಆರೋಪಿಗಳು ದ.ಕ ಪೊಲೀಸ್ ವರಿಷ್ಠಾಧಿಕಾರಿ ಭೂ...
07/12/2016

ಅಕ್ರಮ ಹಣ ಹೊಂದಿದ ಮೂವರ ಬಂಧನ

ಪುತ್ತೂರು ಗ್ರಾಮಂತರ ಪೊಲೀಸರ ಕಾರ್ಯಾಚರಣೆ

೧೮ ಲಕ್ಷ ರೂಪಾಯಿ ಹೊಂದಿದ್ದ ಆರೋಪಿಗಳು

ದ.ಕ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆ ನೇತ್ರತ್ವದಲ್ಲಿ ಕಾರ್ಯಾಚರಣೆ

ಜಾಫರ್ ಷರೀಫ್, ನಝೀರ್, ಮಹಮ್ಮದ್ ಇಕ್ಬಾಲ್
ಬಂದಿತ ಆರೋಪಿಗಳು

ಬಂಧಿತರಿಂದ ಹದಿನೆಂಟು ಲಕ್ಷದ ಎಂಭತ್ತುಸಾವಿರ ರೂ ವಶ

ಎರಡು ಸಾವಿರ ರೂ ಮುಖಬೆಲೆಯ 16,80,000ರೂ

ನೂರು ರೂ ಮುಖಬೆಲೆಯ 1,90,700 ರೂ

ಐವತ್ತು ರೂಪಾಯಿ ಮುಖಬೆಲೆಯ 9,300 ರೂಪಾಯಿ ವಶ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು

Address

Mangalore
575001

Website

Alerts

Be the first to know and let us send you an email when Save Balkunje posts news and promotions. Your email address will not be used for any other purpose, and you can unsubscribe at any time.

Share