23/06/2026
70-89 ರ ದಶಕದ ಮದ್ಯಮವರ್ಗದ ಫ್ಯಾಮಿಲಿ ಹೇಗಿತ್ತು ಗೊತ್ತಾ ?
ಬ್ರೆಡ್ ತಿನ್ನಬೇಕು ಅಂದ್ರೆ ಜ್ವರನೇ ಬರಬೇಕಿತ್ತು..
ಹೊಸ ಬಟ್ಟೆ ತಕೋಬೇಕಂದ್ರೆ ಹಬ್ಬಗಳೇ ಬರಬೇಕಿತ್ತು...
ಹಿರಿಯವಳ ಹಳೆ ಬಟ್ಟೆಗಳು, ಕಿರಿಯವಳೇ ಹಾಕ್ಬೇಕಿತ್ತು...
ಹೋಳಿಗೆ ತಿನ್ನೋಕೆ ಯುಗಾದಿ, ಕಜ್ಜಾಯ ತಿನ್ನೋಕೆ ಮಹಾಲಯ ಅಮಾವಾಸ್ಯೆ ಬರಬೇಕಿತ್ತು....
ದ್ರಾಕ್ಷಿ ಗೋಡಂಬಿ ತಿನ್ನಬೇಕು ಅಂದ್ರೆ ಹಬ್ಬಕ್ಕೆ ಪಾಯಸ ಮಾಡಬೇಕಿತ್ತು...
ನೆಂಟರ ಊರಿಗೆ ಹೋಗಬೇಕು ಅಂದ್ರೆ ಸಂಬಂಧಿಕರ ಮದುವೆ ಇರಬೇಕಿತ್ತು ಅಥವಾ ಯಾರಾದರೂ ಸಾಯಬೇಕಿತ್ತು...
ಹೊಸ ಪೇಸ್ಟ್ ಬಳಸಬೇಕಿದ್ರೆ, ಆ ಪೇಸ್ಟ್ ಮುಗಿದು, ಅದನ್ನು ಕಟ್ ಮಾಡಿ ಅದರೊಳಗಿದ್ದ ಪೇಸ್ಟ್ ಎಲ್ಲ ಖಾಲಿ ಮಾಡ್ಬೇಕಿತ್ತು...
ಹೊಸ ಸ್ಲಿಪ್ಪರ್ ತಕೊಬೇಕಿದ್ರೆ, ಹಳೆ ಚಪ್ಪಲಿ ಕಿತ್ತು ಹೋಗ್ಬಿರಬೇಕು...
ಹಳೆ ಬಟ್ಟೆಗಳೆಲ್ಲ ಕಾಲು ಒರೆಸುವ ಮ್ಯಾಟ್ ಗಳಾಗುತ್ತಿತ್ತು...
ಹೊಸ ಪೆನ್ ತಕೊಂಡಿದ್ದೇ ಇಲ್ಲ, ಹೊಸ ರೀಫಿಲ್ ಸಾಕಿತ್ತು...
ಅಕ್ಕ ಪಕ್ಕದವರ ಬಳಿ ಈರುಳ್ಳಿ, ಬೆಳ್ಳುಳ್ಳಿ, ಟಮೋಟ, ಆಗಾಗ್ಗೆ 100, 200 ರೂ.
ತೆಗೆದುಕೊಂಡಿದ್ದೇ ದೊಡ್ಡ ಸಾಲ....
ಉಂಡೆ ಕಾಯಿ ಬದಲು ಕಟ್ ಮಾಡಿರುವ ಚೂರು ಕಾಯಿ ತರುತಿದ್ದೇವು....
ಬಿಸ್ಲೇರಿ ನೀರು ಇರಲಿಲ್ಲ ಡೈರೆಕ್ಟ್ ನಲ್ಲಿ ನೀರು ಕುಡಿಯುತ್ತೆದೆವು...
ಇಲ್ಲ ಎಂಬ ಕೊರಗಿರಲಿಲ್ಲ ,
ಬೇಕು ಎಂಬ ಆಸೆಯೂ ಇರಲಿಲ್ಲ
ಇದ್ದಷ್ಟನ್ನೇ ಸಂತೋಷದಿಂದ ಅನುಭವಿಸಿದ ತಲೆಮಾರು ನಮ್ಮದು.
ಈಗ ಸಿಕ್ಕಿದ್ದೆಲ್ಲ ಸಿಗುತ್ತಿದೆ, ಬೇಕಾದದ್ದೆಲ್ಲ ಖರೀದಿಸುವ ಆಸೆ ಹೆಚ್ಚಿದೆ.
ಬದುಕು ಬರೀ EMI ನಲ್ಲೇ ನಡೆಯುತ್ತಿದೆ..
ಕಾಲಾಯ ತಸ್ಮೈ ನಮಃ..
ನೀವ್ ಹೇಳಿ ಎಷ್ಟು ಜನ ಹೊಲ ಮನೆ ಮಾರಿದ್ರು, ನಿಮ್ಮವ್ರು ಊರ್ ಬಿಟ್ರು 🙏
ಅದೇ ರೀತಿ ಇದು ಯಾರು ಬರೆದಿದ್ದು ಅಂತ ಗೊತ್ತಿಲ್ಲ, ಆದ್ರೆ ಚೆನ್ನಾಗಿ ಬರೆದಿದ್ದಾರೆ.
*ಮನೆಯಸುತ್ತ ಕಾಂಪೌಂಡು,*
*ಗೇಟು ಭದ್ರ..*
*ಒಳಗಿರುವ ಮನಸುಗಳೇ*
*ಏಕೋ ಛಿದ್ರ ಛಿದ್ರ...!*
*ಬಂಧುಗಳೇ ಬಾರದ,*
*ಸ್ನೇಹಿತರೂ ಸೇರದ*
*ಮನೆಗಳ ಮುಂದೆ*
*ಸದಾ ಕಾವಲುಗಾರ...!*
*ಇಂದು ಮನೆಯಲ್ಲಿ*
*ಅನ್ನವೇ ಬೇಯುತ್ತಿಲ್ಲ,*
*ಮನಸುಗಳು ಮಾತ್ರ*
*ಕುದಿಯುತ್ತಿವೆಯಲ್ಲ...!*
*ಅಡುಗೆ ಮನೆ,*
*ಸದಾ ಖಾಲಿ ಖಾಲಿ ಇರುತ್ತೆ.*
*ಫೋನಿಂದ ಕೂತಲ್ಲಿಗೆ*
*ಊಟ ತಿಂಡಿ ಬರುತ್ತೆ...!*
*ಮನೆಗಳಾಗುತ್ತಿವೆ*
*ಮಹಡಿಗಳಿಂದ ಎತ್ತರ , ಎತ್ತರ...*
*ಮನಸ್ಸುಗಳೇ ಆಗುತ್ತಿಲ್ಲ*
*ಹತ್ತಿರ , ಹತ್ತಿರ...!*
*ಸಂತೋಷ ಏನೆಂಬುದಕ್ಕೆ*
*ಸಿಗುತ್ತಿಲ್ಲ ಉತ್ತರ...!*
*ಅಂದು...ಬಿಸಿಲು, ಮಳೆ,*
*ಚಳಿಗೆ ಮೈ ಒಗ್ಗಿತ್ತು,*
*ಮನೆ ತಣ್ಣಗಿತ್ತು ,*
*ಒಲೆ ಹೊಗೆಯಾಡುತ್ತಿತ್ತು ,*
*ಬಿಸಿನೀರ ಹಂಡೆ*
*ಹಬೆಯಾಡುತ್ತಿತ್ತು...!*
*ಕಣಜದ ತುಂಬಾ*
*ದವಸ ಧಾನ್ಯ ತುಂಬಿತ್ತು,*
*ಬಂಧು ಬಳಗದ*
*ನಡುವೆ ಅನುಬಂಧವಿತ್ತು..*
*ಎಲ್ಲರೊಟ್ಟಿಗೆ ಮನೆಯೂ*
*ನಗೆಯಾಡುತಿತ್ತು...!*
*ಮನೆ ಚಿಕ್ಕದಾದ್ರೂ,*
*ಮನಸು ಚೊಕ್ಕವಾಗಿತ್ತು...!*
*ಅಂದು ನನ್ನಜ್ಜ ಕಟ್ಟಿದ*
*ಮನೆಯಲ್ಲಿ ನಲಿವಿತ್ತು,*
*ಒಲವಿತ್ತು, ಸಂತಸದ ಸೆಲೆಯಿತ್ತು...!*
*ಮುಖ್ಯ ಬಾಗಿಲು*
*ಚಿಕ್ಕದಿತ್ತು,*
*ತಲೆಬಾಗಬೇಕಿತ್ತು...*
*ಮಣ್ಣಿನ ಗೋಡೆ,*
*ಸಾರಿಸಿದ ನೆಲವಿತ್ತು*
*ಮಾಡು ಚಿಕ್ಕದಿತ್ತು,*
*ಬದುಕು ದೊಡ್ಡದಿತ್ತು,*
*ನೋವುಗಳಿದ್ದರೂ*
*ಬದುಕಿಗೆ ಬೆಲೆಯಿತ್ತು,*
*ಚಾಪೆಯಲಿ ಕಣ್ಣಿಗೆ*
*ಚೆಂದದ ನಿದ್ರೆಯಿತ್ತು...*
*ಅಂದು ಆಸ್ಪತ್ರೆಯ*
*ಹಂಗೇ ಇರಲಿಲ್ಲ*
*ಎಲ್ಲ ಸಮಸ್ಯೆಗಳಿಗೂ*
*ಮನೆಯಲ್ಲೇ ಮದ್ದಿತ್ತು*
*ಮಗುವೂ ಕೂಡ*
*ಮನೆಯಲ್ಲೇ ಹುಟ್ಟುತ್ತಿತ್ತು...*
*ಮದುವೆ ಕೂಡ*
*ಮನೆಯಲ್ಲೇ ನೆಡೆಯುತ್ತಿತ್ತು...*
*ಚಿತ್ರ ವಿಚಿತ್ರದ*
*ಛತ್ರವೇ ಬೇಕಿರಲಿಲ್ಲ...*
*ಕೆಲಸಕ್ಕೆ ಶ್ರದ್ಧೆ,*
*ದೇವರ ಮೇಲೆ*
*ನಂಬಿಕೆಯಿತ್ತು...*
*ಸಾವಿಗೂ ಸಹ*
*ಮನೆಯೇ*
*ಸಾಕ್ಷಿಯಾಗುತ್ತಿತ್ತು...*
*ಹಲವು ಮಕ್ಕಳು*
*ಹುಟ್ಟಿದ ಸಂತಸವಿತ್ತು*
*ಅವರ ಬಾಲ್ಯದ,*
*ಬದುಕಿನ ಸಂಭ್ರಮವಿತ್ತು....*
*ನೆಂಟರು ಬಂದರೆ,*
*ಹಬ್ಬದ ಸಡಗರವಿತ್ತು*
*ಕೆಲವು ಸಾವುಗಳ*
*ಸೂತಕವೂ ಇತ್ತು*
*ಸತ್ತ ಹಿರಿಯರ ನೆನಪು*
*ಅಚ್ಚಳಿಯದೇ ಉಳಿದಿತ್ತು...!*
*ಕಷ್ಟಗಳ ಗೆದ್ದ ಗೆಲುವಿನ*
*ಧ್ಯೋತಕವೂ ಇತ್ತು...*
*ಬದುಕಿನ ಸಾಧಕ*
*ಭಾದಕಗಳೆಲ್ಲವೂ ಇತ್ತು...*
*ಇಂದು ,ಮನೆ ರಾಜನಿಲ್ಲದ*
*ಅರಮನೆಯಂತೆ,*
*ಸಕಲ ಸವಲತ್ತು ಗಳಿರುವ*
*ದರ್ಬಾರಿನಂತೆ,*
*ನೆರೆ ಮನೆಯ ಹಂಗಿಲ್ಲದ*
*ಸೆರೆಮನೆಯಂತೆ*
*ಆದ್ರೂ ಎಲ್ಲರಿಗೂ*
*ಬರೀ ದುಡ್ಡಿನದೇ*
*ಚಿಂತೆ ಚಿಂತೆ...*
*ಶುಭ ಕಾರ್ಯಗಳು,*
*ಸಂತೋಷ ಕೂಟಗಳು,*
*ಮನೆಬಿಟ್ಟು, ಹೋಟೆಲ್ಲುಗಳ*
*ಸೇರಿಕೊಂಡಿವೆ..*
*ಬಂಧುತ್ವ ಮಿತೃತ್ವಗಳು*
*ಬಂಧನದಲ್ಲಿವೆ...*
*ನೆಂಟರಿಷ್ಟರು ಮನೆಗೆ*
*ಬಂದರೆ, ಬರೀ ನಕ್ಕೂ*
*ನಗದೇ ಕೋಣೆ*
*ಸೇರಿಕೊಳ್ಳುತ್ತಿದ್ದಾರೆ*
*ಮನೆ ಮಕ್ಕಳು....*
*ಸ್ನೇಹ, ಸಂಬಂಧಗಳಲ್ಲೂ ತೋರಿಕೆ, ತಾತ್ಸಾರ, ನಂಬಿಕೆ ಒಗ್ಗಟ್ಟುಗಳಂತೂ ಬಹಳವೇ ದೂರ...!*
*ಮತ್ತೆ ಬರಲಿ ಆ ತುಂಬು ಕುಟುಂಬದ ಕಾಲ. ಆಗಲಿ ಮನೆ ಮನಗಳೂ ನಂದಗೋಕುಲ...!*
*ಅರ್ಥವಾಗಲಿ ಸರ್ವರಿಗೂ ಸಂಬಂಧದ ಬೆಲೆ...! ಕಲಿಯಲಿ ಎಲ್ಲರು ಸಂತಸದಿ, ಒಟ್ಟಾಗಿ ನಗುವ ಕಲೆ...!*
*ಆಗಲಿ ದ್ವೇಷ ಸ್ವಾರ್ಥ ಮತ್ಸರಗಳಿಗೆ ಸೋಲು. ಶ್ರೀಮಂತಿಕೆ ಗಿಂತ ಹೃದಯವಂತಿಕೆ ಮೇಲು...!*