ಮನು ಕಿ ಬಾತ್ Manu ki Bath

ಮನು ಕಿ ಬಾತ್ Manu ki Bath 3D Perspective or House Designs Etc

VEDA VIGNANA PATASHALA near BALLARYಬಳ್ಳಾರಿ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ವೇದ ವಿಜ್ಞಾನ ಪಾಠಶಾಲಾ (ಸಂಗನಕಲ್ಲು ಗ್ರಾಮ)CLASS ROOM,...
11/01/2026

VEDA VIGNANA PATASHALA near BALLARY
ಬಳ್ಳಾರಿ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ವೇದ ವಿಜ್ಞಾನ ಪಾಠಶಾಲಾ (ಸಂಗನಕಲ್ಲು ಗ್ರಾಮ)
CLASS ROOM, YAGNA SHALA, DORMITORY, DININGHALL, KITCHEN, RECEPTION, CONFERENCE



Duplex House on South East Corner Site (30' x 40')Ground floor: 1 BHK + ParkingFirst Floor: Living+sitout, Kitchen, Dini...
16/05/2025

Duplex House on South East Corner Site (30' x 40')
Ground floor: 1 BHK + Parking
First Floor: Living+sitout, Kitchen, Dining and a Bed Room
Second Floor : 2 Bed Rooms and Family Living Area.
Terrace Floor: One Multipurpose Room and open Terrace with Pergolas

ಈ ಮನೆಯ ಹೆಚ್ಚಿನ ವಿವರ ಗೊತ್ತಿಲ್ಲ. ಪಾಂಡಿಚೇರಿ ನಲ್ಲೆಲ್ಲೋ ಕಟ್ಟಿರೋ ಮನೆಯ Floor Plan ಕಳಿಸಿ ಅದರ Interior Design ಮಾಡೋಕೆ ಒಬ್ರು ಆರ್ಕಿಟ...
16/02/2025

ಈ ಮನೆಯ ಹೆಚ್ಚಿನ ವಿವರ ಗೊತ್ತಿಲ್ಲ. ಪಾಂಡಿಚೇರಿ ನಲ್ಲೆಲ್ಲೋ ಕಟ್ಟಿರೋ ಮನೆಯ Floor Plan ಕಳಿಸಿ ಅದರ Interior Design ಮಾಡೋಕೆ ಒಬ್ರು ಆರ್ಕಿಟೆಕ್ಟ್ ಕೇಳಿದ್ರು. ಈ ಮನೆ ಅಂದಾಜು 35' x 38' ಅಡಿಗಳಿದೆ. ಇದು ಟೆರಾಕೋಟಾ ಬ್ರಿಕ್ಸ್ (Porotherm Bricks)ನಲ್ಲಿ ಕಟ್ಟಿರೋ ಮನೆ ಆಗಿದ್ದಕ್ಕೆ, ಅದ್ಕಕೆ ಮ್ಯಾಚ್ ಆಗೋ ಹಾಗೆ ಆತನಗುಡಿ Hand Made Tiles ಬೇಕು ಅಂತ ಕೇಳಿದ್ರು. ಹಾಗೆ ಅದೇ ಸ್ಟೈಲ್ ನಲ್ಲಿ ಮರದ ಕಂಬಗಳು etc. ದೇವರ ಕೋಣೆಯ ಬಾಗಿಲು ಮಾಡೋಕೆ ಸುಸ್ತಾಗೋಯ್ತು.

Old Style to New Style(Renovation of a Old Bungalow site size- 38' x 55')
24/07/2024

Old Style to New Style
(Renovation of a Old Bungalow site size- 38' x 55')

33' x 45' ಅಳತೆಯ ಸೈಟ್ ನಲ್ಲಿ ಡ್ಯುಪ್ಲೆಕ್ಸ್ ಮನೆ. A ಮನೆ ಓನರ್ ಬಯಕೆಯಂತೆ ಡಿಸೈನ್ ಮಾಡಿದ್ದು. B ಅದೇ ಸೇಮ್ ಪ್ಲಾನ್ ಗೆ ಬೇರೆ ರೀತಿಯಲ್ಲಿ ಡಿ...
25/05/2024

33' x 45' ಅಳತೆಯ ಸೈಟ್ ನಲ್ಲಿ ಡ್ಯುಪ್ಲೆಕ್ಸ್ ಮನೆ.
A ಮನೆ ಓನರ್ ಬಯಕೆಯಂತೆ ಡಿಸೈನ್ ಮಾಡಿದ್ದು.
B ಅದೇ ಸೇಮ್ ಪ್ಲಾನ್ ಗೆ ಬೇರೆ ರೀತಿಯಲ್ಲಿ ಡಿಸೈನ್ ಮಾಡಿದ್ದು.

A & B ಡಿಸೈನ್ ಗಳಲ್ಲಿ ಯಾವುದು ಫೈನಲ್ ಆಗಿರಬಹುದು?
ನಿಮ್ಮ ಕಣ್ಣಿಗೆ ಯಾವುದು ಹೆಚ್ಚು ಚನ್ನಾಗಿ ಕಾಣಿಸ್ತಿದೆ?

ಇದು 30' x 53' ಅಳತೆಯ ಸೈಟ್. ಒಬ್ರು ಒಂದು ವರ್ಷದ ಹಿಂದೆ ಈ Duplex ಮನೆಯ ಪ್ಲಾನ್ ಕಳಿಸಿ Elevation ಮಾಡಿ ಕೊಡ್ತೀರಾ ಅಂತ ಕೇಳಿದ್ರು, ಆಯ್ತು ...
26/04/2024

ಇದು 30' x 53' ಅಳತೆಯ ಸೈಟ್. ಒಬ್ರು ಒಂದು ವರ್ಷದ ಹಿಂದೆ ಈ Duplex ಮನೆಯ ಪ್ಲಾನ್ ಕಳಿಸಿ Elevation ಮಾಡಿ ಕೊಡ್ತೀರಾ ಅಂತ ಕೇಳಿದ್ರು, ಆಯ್ತು ಅಂದಿದ್ದೆ.. ಆದ್ರೆ ಅವರು ಆಮೇಲೆ ಏನು ಕೇಳಲೂ ಇಲ್ಲ ಹೇಳಲು ಇಲ್ಲ. ಈಗ ಕಳೆದ ತಿಂಗಳು ಆಲ್ಮೋಸ್ಟ್ ಮನೆ ಫಿನಿಶ್ ಆಗೋ ಹಂತದಲ್ಲಿ ಫೋಟೋಸ್ ಕಳಿಸಿ ಈಗ ಎಲಿವೇಷನ್ ಮಾಡಿ ಅಂತ ಹೇಳಿದ್ರು!
ಈ ಹಂತದಲ್ಲಿ ಅವರಿಗೆ ಮನೆ ಚಂದ ಬರ್ಲೆ ಬೇಕು ಅಂದ್ರೆ ಮುಂದೆ ಬಂದಿರೋ ಸ್ಲಾಬ್ ಗಳನ್ನ ಕಟ್ ಮಾಡಬೇಕು.. ಎದುರಿಗೆ ಕಾಣಿಸ್ತಾ ಇರೋ ಕಿಟಕಿ ಚಜ್ಜಾ ಕೂಡಾ ಕಟ್ ಮಾಡಿ ಕಿಟಕಿಯನ್ನು ಹೀಗೆ ಉದ್ದ ಮಾಡುವ ಅಸೆ ಆದ್ರೆ ಮಾಡಬೇಕು. ಪ್ಲಾಸ್ಟ್ರಿಂಗ್ ಎಲ್ಲಾ ಆದ್ಮೇಲೂ ಇನ್ನು ಕೆಲವು ಬ್ರಿಕ್ ವರ್ಕ್ ಮಾಡಿ ಮತ್ತೆ ಪ್ಲಾಸ್ಟರ್ ಮಾಡ್ಲೇಬೇಕು.

ಹೀಗೆ ತುಂಬಾ ಜನ ಮಾಡ್ತಾ ಇರ್ತಾರೆ.. ಇಂತಾ ಮನೆಗಳಿಗೆ ಎಲಿವೇಷನ್ ಐಡಿಯಾ ಗಳನ್ನ ಮೊದಲೇ ಮಾಡ್ಕೋ ಬೇಕು ಅಂತ ಹೇಳಿದ್ರು ಅರ್ಥನೇ ಮಾಡ್ಕೊಳೋದಿಲ್ಲ. ಈಗ ಆಗೋ ನಷ್ಟ ಲೆಕ್ಕ ಹಾಕಿದ್ರೆ ಯಾರಿಗೂ ಲಾಭ ಇಲ್ಲ.

ಗ್ರಾಮೀಣ ಬಾಗದಲ್ಲಿ ಕಟ್ಟುವ ಸಿಂಗಲ್ ಫ್ಲೋರ್ ಮನೆಗಳಿಗೆ ಎಲೆವೇಶನ್ ಡಿಸೈನ್ ಮಾಡೋದು ಸ್ವಲ್ಪ ಕಷ್ಟ. ಹೀಗೆ ಪ್ಲಾಟ್ ರೂಫ್ ಇರೋದ್ರಿಂದಾ ಸುತ್ತಲೂ ಪ...
19/04/2024

ಗ್ರಾಮೀಣ ಬಾಗದಲ್ಲಿ ಕಟ್ಟುವ ಸಿಂಗಲ್ ಫ್ಲೋರ್ ಮನೆಗಳಿಗೆ ಎಲೆವೇಶನ್ ಡಿಸೈನ್ ಮಾಡೋದು ಸ್ವಲ್ಪ ಕಷ್ಟ. ಹೀಗೆ ಪ್ಲಾಟ್ ರೂಫ್ ಇರೋದ್ರಿಂದಾ ಸುತ್ತಲೂ ಪ್ಯಾರಾಪೆಟ್ ವಾಲ್ ಕಟ್ಟಲೆ ಬೇಕು. ಬಾಗಿಲ ಮುಂದಿನ ಪೋರ್ಟಿಕೋ ಸಾದಾರಣವಾಗಿ ಇದ್ದೆ ಇರತ್ತೆ. ಮೇಲೆ ಟೆರೇಸ್ ಗೆ ಹೋಗೋಕೆ ಒಂದು ಮೆಟ್ಟಿಲು ಬೇಕೇ ಬೇಕು.. ಇವೆ ಮೂರೂ ಇಟ್ಕೊಂಡು ಏನಾದ್ರೂ ಮಾಡೋದು..

Courtyard House ಅಥವಾ ತೊಟ್ಟಿ ಮನೆಯ ಒಂದು ಮುಖ್ಯ ತೊಡಕು ಅಂದ್ರೆ ಸೆಕ್ಯೂರಿಟಿ.. ಮದ್ಯೆದಲ್ಲಿ ಸಂಪೂರ್ಣ ಆಕಾಶವನ್ನು (ಅವಕಾಶ) ಬಿಡೂದ್ರಿಂದಾ ಅ...
05/03/2024

Courtyard House ಅಥವಾ ತೊಟ್ಟಿ ಮನೆಯ ಒಂದು ಮುಖ್ಯ ತೊಡಕು ಅಂದ್ರೆ ಸೆಕ್ಯೂರಿಟಿ.. ಮದ್ಯೆದಲ್ಲಿ ಸಂಪೂರ್ಣ ಆಕಾಶವನ್ನು (ಅವಕಾಶ) ಬಿಡೂದ್ರಿಂದಾ ಅಲ್ಲಿಂದಾ ಕಳ್ಳರು ಬಂದ್ರೆ.. ಅಥವಾ ಹಳ್ಳಿಯ ಪ್ರದೇಶವಾಗಿದ್ರೆ ಮಂಗ ಸೀದಾ ಮನೆ ಒಳಗೆ ಬಂದ್ರೆ ಅನ್ನೋ ಪ್ರಶ್ನೆ!
Courtyard ಕಾನ್ಸೆಪ್ಟ್ ಇರೋದೇ Open to Sky. ವಾಸ್ತು ನವರು ಕೂಡಾ ಬ್ರಮ್ಮ ಸ್ಥಾನ ಹಾಗೆ ಸಂಪೂರ್ಣ ಓಪನ್ ಇದ್ರೆ ಒಳ್ಳೇದು ಅಂತ ಖುಷಿ ಪಡ್ತಾರೆ ನಿಜ.. ಆದರೆ ನಾವು ಸೆಕ್ಯೂರಿಟಿಗೋಸ್ಕರ ಆ ಜಾಗಕ್ಕೆ ಗ್ರಿಲ್ ಹಾಕೋ ಉಪಾಯ ಮಾಡ್ತೀವಿ.. ಆದ್ರೆ ಹಾಗೆ ಗ್ರಿಲ್ ಹಾಕಿ ಅದರ ಮೇಲೆ ಗ್ಲಾಸ್ ಏನಾದ್ರು ಹಾಕಿದ ಮೇಲೆ ತೊಟ್ಟಿ ಮನೆಯ ಅರ್ಧ Beauty ಹೋಯ್ತು ಅಂತಾನೆ ಲೆಕ್ಕ!

ಈ ಮನೆಯನ್ನು ನೋಡಿ, ಮನೆಯ ಮದ್ಯ ಬಾಗಕ್ಕೆ 10' x 10' Courtyard ಬರೋ ಹಾಗೆ ಮಾಡಿದೀನಿ. ಆದ್ರೆ ಸೆಕ್ಯುರಿಟಿಯ ಸಮಸ್ಯೆನೂ ಇಲ್ಲದ ಹಾಗೆ ಮಾಡಿದೀನಿ. Courtyard ಅಲ್ಲದೆ ಮನೆಯ ಬಹಳಷ್ಟು ಜಾಗ ಡಬ್ಬಲ್ ಹೈಟ್ ಅಂದ್ರೆ ಸೀದಾ ಹಂಚಿನ ಚಾವಣಿ ಕಾಣತ್ತೆ. ಹಳ್ಳಿಯಾ ವಾತಾವರಣಕ್ಕೆ ಮನೆ ಸ್ವಲ್ಪ ಮಾಡ್ರನ್ ಆಗೀನು ಇರ್ಬೇಕು, ಹಾಗೂ ನಮ್ಮ ಪೂರ್ವಜರ ಮನೆಗಳ ಹಾಗೆ ಹಂಚು ಇರ್ಬೇಕು ಅಂತ ಅಸೆ ಇದವರು ಹೀಗೆ ಪ್ರಯತ್ನಿಸಬಹುದು. ಆದ್ರೆ ಇಂತಾ ಮನೆಗೆ ಟೆರೇಸ್ ಸಿಗೋಲ್ಲ.

ಮನೆಯ ಅಳತೆ 39' X 40', ರಸ್ತೆ ಪಶ್ಚಿಮಕ್ಕೆ ಇದ್ರೂ ಪೂರ್ವ ಈಶಾನ್ಯಕ್ಕೆ ಬಾಗಿಲು ಬೇಕು ಅಂತ ಕೇಳಿದಕ್ಕೆ ಪಕ್ಕನೆ ಮನೆಯ ಬಾಗಿಲು ರಸ್ತೆಗೆ ಕಾಣಿಸ್ತಾ ಇಲ್ಲ. ನೆಲ ಮಹಡಿಯಲ್ಲಿ 3 ಬೆಡ್ ರೂಮ್ ಗಳು. ಅಡುಗೆ ಮನೆ+ ಡೈನಿಂಗ್, L ಆಕಾರದಲ್ಲಿ ದೊಡ್ಡ ಲಿವಿಂಗ್. ಅಡುಗೆ ಮನೆಯೇ ಹಿಂದೆ ಯುಟಿಲಿಟಿ.. ಯುಟಿಲಿಟಿ ಹೊರಗೆ ಕೈ ತೋಟ. ಮೊದಲ ಮಹಡಿಯಲ್ಲಿ ಮತ್ತೆ 2 ಬೆಡ್ ರೂಮ್ಸ್, 1 ಮಲ್ಟಿ ಪರ್ಪಸ್ ರೂಮ್ & ಮೂರೂ ಕಡೆ ಬಾಲ್ಕನಿಗಳು ಇದೆ. ಮಲ್ಟಿ ಪರ್ಪಸ್ ರೂಮ್ ಅಂದ್ರೆ ಅಲ್ಲೇ ಸ್ಟಡಿ , ವರ್ಕ್ಸ್ ಹಾಗೂ ದೊಡ್ಡ TV ಅಥವಾ ಸ್ಕ್ರೀನ್

ಸುಮಾರು 20 ವರ್ಷದ ಹಿಂದೆ ಕಟ್ಟಿಸಿದ 25'x35' ಅಳತೆಯ ಸಾಧಾರಣ ಮನೆ ಇದಾಗಿತ್ತು. ಈಗ ಮೇಲೆ ಇನ್ನೊಂದು ಮಹಡಿ ಕಟ್ಟಿದಮೇಲೆ  Duplex ಮನೆಯಾಗಿ ಅಪ್ಗ...
02/12/2023

ಸುಮಾರು 20 ವರ್ಷದ ಹಿಂದೆ ಕಟ್ಟಿಸಿದ 25'x35' ಅಳತೆಯ ಸಾಧಾರಣ ಮನೆ ಇದಾಗಿತ್ತು. ಈಗ ಮೇಲೆ ಇನ್ನೊಂದು ಮಹಡಿ ಕಟ್ಟಿದಮೇಲೆ Duplex ಮನೆಯಾಗಿ ಅಪ್ಗ್ರೇಡ್ ಆಯ್ತು.
Before: 2 ವರ್ಷ ಹಿಂದಿನ ಫೋಟೋ
After: ಇಂದಿನ ಫೋಟೋ

ಸಣ್ಣ ಸೈಟ್ (ಸುಮಾರು 30' x 30')ಸರಳ ಡ್ಯುಪ್ಲೆಕ್ಸ್ ಮನೆ. ಗ್ರೌಂಡ್ ಫ್ಲೋರ್ ನಲ್ಲಿ ಒಂದು ಆಫೀಸ್ ಹಾಗು ಮಿಕ್ಕಿದ್ದೆಲ್ಲ ಪಾರ್ಕಿಂಗ್. ಫಸ್ಟ್ ಫ್...
17/11/2023

ಸಣ್ಣ ಸೈಟ್ (ಸುಮಾರು 30' x 30')ಸರಳ ಡ್ಯುಪ್ಲೆಕ್ಸ್ ಮನೆ.
ಗ್ರೌಂಡ್ ಫ್ಲೋರ್ ನಲ್ಲಿ ಒಂದು ಆಫೀಸ್ ಹಾಗು ಮಿಕ್ಕಿದ್ದೆಲ್ಲ ಪಾರ್ಕಿಂಗ್.
ಫಸ್ಟ್ ಫ್ಲೋರ್ ನಲ್ಲಿ ಹಾಲ್ ಅಡುಗೆ ಮನೆ+ ಯುಟಿಲಿಟಿ, ಡೈನಿಂಗ್, ದೇವರ ಮನೆ ಬೆಡ್ ರೂಮ್ ಹಾಗೂ ಬಾತ್ ರೂಮ್
ಸೆಕೆಂಡ್ ಫ್ಲೋರ್ ನಲ್ಲಿ ಎರಡು ರೂಮ್ ಗಳು, ಬಾತ್ ರೂಮ್ ಹಾಗೆ ಮುಂದೆ ಸಿಟ್ ಔಟ್ ಗೆ ಮಂಗಳೂರು ಹಂಚಿನ ಮಾಡು. ಎಲಿವೇಷನ್ ಕೂಡಾ extra ಖರ್ಚ್ ಮಾಡಿಲ್ಲ.
(ಅಟ್ಯಾಚ್ ಬಾತ್ ರೂಮ್ ಯಾವದಕ್ಕು ಇಲ್ಲ. ಸರಳವಾಗಿ ಹೀಗೂ ಮನೆ ಕಟ್ಟಿಸಬಹುದು)

Address

Malleswaram
Bangalore
560003

Website

Alerts

Be the first to know and let us send you an email when ಮನು ಕಿ ಬಾತ್ Manu ki Bath posts news and promotions. Your email address will not be used for any other purpose, and you can unsubscribe at any time.

Contact The Business

Send a message to ಮನು ಕಿ ಬಾತ್ Manu ki Bath:

Share