05/06/2021
ನಾಡಿನ ಸಮಸ್ತ ಜನತೆಗೆ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು,
ನನಗೆ ಬೆಳ್ಳಗೆ ಎದ್ದತಕ್ಷಣ ವಾಟ್ಸಪ್ ನೋಡೊ ಒಂದು ಖಾಯಿಲೆ ಅದು ನಮ್ಮಂತ ಯುವಕರಲ್ಲಿ ಸರ್ವೆ ಸಾಮಾನ್ಯ, ಹಾಗಂತ ಎಲ್ಲಾ ಯುವಕರಲ್ಲು ಈ ಖಾಯಿಲೆ ಇರೊಲ್ಲ, ಇವತ್ತು ಯಾರ್ ವಾಟ್ಸಪ್ಪ್ ಸ್ಟೇಟಸ್ ನೊಡಿದ್ರು ವಿಶ್ವ ಪರಿಸರ ದಿನದ ಶುಭಾಶಯಗಳ ವಿಷಯ ತುಂಬಿತ್ತು.ಈಗ ಲಾಕ್ಡೌನ್ ಬೇರೆ ಆಫೀಸ್ ವರ್ಕ್ ಕೂಡ ಇಲ್ಲಾ ಇವತ್ತು ಎನ್ ಮಾಡೋದು ಅಂತ ಹಾಗೆ ಯೋಚನೆ ಮಾಡುತ್ತ ಕುಳಿತೆ ಪರಿಸರ ದಿನ ಅಂದರೆ ಏನು, ಎನ್ ಇದು ಇದರ ಹಿನ್ನೆಲೆ ಏನು ಅಂತ ಹಾಗೆ ಸ್ವಲ್ಪ ಗೂಗಲ್ ಮಾಡಿದೆ ಅಲ್ಲಿ ಇಲ್ಲಿ ಸಿಕ್ಕ ಸ್ವಲ್ಪ ವಿಷಯಗಳನ್ನ ಸಂಗ್ರಹ ಮಾಡಿ ಈ ಲೇಖನ ಬರೆದಿದ್ದೇನೆ. ಹಾಗಂತ ನನಗೆ ಲೇಖನ ಬರೆಯೋ ಹವ್ಯಾಸ ಏನು ಇಲ್ಲಾ, ಇದು ನನ್ನ ಮೊದಲ ಲೇಖನ ಏನಾದರು ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ಸಹಾಯ ಮಾಡಿ ಅಂತ ವಿನಂತಿಸುತ್ತ ಲೇಖನ ಫ್ರಾರಂಭಿಸುತ್ತೆನೆ.
ವಿಶ್ವ ಪರಿಸರ ದಿನವನ್ನು 1974 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು ಈ ದಿನವನ್ನು ವಾರ್ಷಿಕವಾಗಿ ಜೂನ್ 5 ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಯುಎನ್(United Nations) ಪ್ರಾಯೋಜಿತ ವಿಷಯದೊಂದಿಗೆ ಈ ದಿನವನ್ನು ಆಚರಿಸುವ ಸಂಪ್ರದಾಯವಿದೆ. ಅಲ್ಲದೆ ಪ್ರತಿ ವರ್ಷ ನಿರ್ಧಿಷ್ಟ ಆತಿಥೇಯ ದೇಶವನ್ನು ವಿಶ್ವಸಂಸ್ಥೆಯು ಆಯ್ಕೆ ಮಾಡುತ್ತದೆ. ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ವಿಶೇಷ ಥೀಮ್ ನೊಂದಿಗೆ ಆಚರಿಸಲಾಗುತ್ತದೆ.ಮೊದಲ ವಿಶ್ಬ ಪರಿಸರ ದಿನದ ಥೀಮ್ "ಕೇವಲ ಒಂದು ಭೂಮಿ"(only one Earth) ಎಂಬ ವಿಷಯದೊಂದಿಗೆ ಆಚರಿಸಲಾಯಿತು.ಈ ಥೀಮ್ ಪರಿಸರ ಕಾಳಜಿಯ ನಿರ್ಧಿಷ್ಟ ವಿಷಯದ ಮೇಲೆ ಕೇಂದ್ರೀಕರಿಸುತ್ತದೆ. ಮಾನವನ ಚಟುವಟಿಕೆಗಳಿಂದ ಪರಿಸರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು ಮನುಷ್ಯರು ಅರಿತುಕೊಳ್ಳುವುದು ಮುಖ್ಯ ಆಲೋಚನೆಯಾಗಿದೆ. ಜಾಗತಿಕವಾಗಿ 143 ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ, 2011ರಲ್ಲಿ ವಿಶ್ವ ಪರಿಸರ ದಿನಾಚರಣೆಯ ಆತಿಥ್ಯವನ್ನು ಭಾರತ ವಹಿಸಿತ್ತು ಇದರ ಥೀಮ್ Forests:Nature at your Service.
ಪ್ರಕೃತಿಗೆ ಹೊಂದಿಕೊಂಡು ಜೇವನ ಸಾಗಿಸುವವರು ನಮ್ಮ ರೈತರು ಅವರಿಗೆ ಈ ಪರಿಸರ ದಿನ ಅಂದರೆನು ಅಂತ ಕೇಳಿದರೆ ಅವರು ಅದಕ್ಕೂ ಒಂದು ದಿವಸ ಮೀಸಲಿದೆಯ ಎಂದು ಕೆಳುತ್ತಾರೆನೊ, ಯಾಕೆಂದರೆ ಪ್ರಕೃತಿ ರೈತರ ಜೀವನದ ಒಂದು ಭಾಗ ಪ್ರತಿದಿನವು ಪ್ರಕೃತಿಯೊಂದಿಗೆ ಅವರ ಜೀವನ ಬೆರೆತುಹೋಗಿದೆ, ಜೀವ ಸಂಕುಲದ ಪ್ರತಿದಿನದ ಬೆಡಿಕೆಯನ್ನು ಪ್ರಕೃತಿ ಈಡೇರಿಸುತ್ತದೆ, ಹಾಗೆಯೇ ಪ್ರತಿದಿನವು ಪರಿಸರದ ಕಾಳಜಿ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ.
ಮಾನವ ತಾಂತ್ರಿಕವಾಗಿ ಅದೆಷ್ಟು ಮುಂದುವರೆದರು ಕೂಡ ಪ್ರಕೃತಿಯ ಮುಂದೆ ಅದು ತೃಣಕ್ಕೆ ಸಮ.ಮಾನವ ಜೀವ ಸಂಕುಲದ ಒಂದು ಭಾಗ ಅಷ್ಟೆ,ಪ್ರಕೃತಿಗೆ ಮಾನವನ ಅವಶ್ಯಕತೆಯು ಇಲ್ಲ,ಅನುಕೂಲವಂತು ಮೊದಲೇ ಇಲ್ಲ.ಇದನ್ನು ಅರಿತರಷ್ತೇ ನಮ್ಮ ಮುಂದಿನ ಪೀಳಿಗೆಗೆ ಒಳಿತು.
ಪರಿಸರ ದಿನವನ್ನು ವಾಟ್ಸಪ್ಪ್ ಸ್ಟೇಟಸ್ನನಲ್ಲಿ ಆಚರಿಸದೆ ಹೆಚ್ಚು ಗಿಡ ಮರಗಳನ್ನು ಬೆಳೆಸಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಾಧ್ಯವಾದಷ್ಟು ಕಾಪಾಡುವ ಪ್ರಯತ್ನ ಮಾಡೋಣ.
ಆರೋಗ್ಯಕರ ಪರಿಸರ,ಸಂತೋಷದ ಭವಿಷ್ಯ.