Sahaja Seeds

Sahaja Seeds Sahaja Seeds is the market image of Desi Seed Producer Company Limited.

We are a team of organic producers, seed savers, farmer breeders, gardeners, urban consumers and other like-minded individuals from all across the country.

ಸಾಂಪ್ರದಾಯಿಕ ಎಣ್ಣೆ ಬಳಸಿ, ಅಡುಗೆ ಮಾಡಿ ಸಾಂಪ್ರದಾಯಿಕವಾಗಿ ಕಡಲೆಕಾಯಿ ಎಣ್ಣೆ, ಎಳ್ಳೆ ಎಣ್ಣೆ, ತೆಂಗಿನ ಎಣ್ಣೆ, ಕುಸುಬೆ ಎಣ್ಣೆ, ಅಗಸಿ ಎಣ್ಣೆ, ...
02/01/2026

ಸಾಂಪ್ರದಾಯಿಕ ಎಣ್ಣೆ ಬಳಸಿ, ಅಡುಗೆ ಮಾಡಿ

ಸಾಂಪ್ರದಾಯಿಕವಾಗಿ ಕಡಲೆಕಾಯಿ ಎಣ್ಣೆ, ಎಳ್ಳೆ ಎಣ್ಣೆ, ತೆಂಗಿನ ಎಣ್ಣೆ, ಕುಸುಬೆ ಎಣ್ಣೆ, ಅಗಸಿ ಎಣ್ಣೆ, ಸಾಸಿವೆ ಎಣ್ಣೆ ,ಹರಳೆಣ್ಣೆ...ಮೊದಲಾದ ಸಾಂಪ್ರದಾಯಿಕ ಎಣ್ಣೆಗಳನ್ನು ಬಳಸಿ ರುಚಿಕರ ಅಡುಗೆಗಳನ್ನು ಮಾಡುತ್ತಿದ್ದರು.

ಹರಳೆಣ್ಣೆಯನ್ನೇ ಒಗ್ಗರಣೆಗೆ ಬಳಸುತ್ತಿದ್ದ ಅನೇಕ ಹಳ್ಳಿಗರ ನಾ ನೋಡಿದ್ದೇನೆ. ಅದರ ರುಚಿಯೇ ವಿಭಿನ್ನ. ಉತ್ತರ ಕರ್ನಾಟಕದಲ್ಲಂತೂ ಕುಸುಬೆ,ಅಗಸಿ, ಗುರೆಳ್ಳು ಎಣ್ಣೆ ಮಾಡಿಕೊಡುವ 'ಗಾಣಿಗರ' ಈಗಲೂ ನೋಡಬಹುದು.

ಆರೋಗ್ಯವನ್ನೇ ವ್ಯಾಪಾರ ಮಾಡಿಕೊಂಡಿರುವ ಕಾರ್ಪೋರೇಟ್ ಕಂಪನಿಗಳು, ಸುಳ್ಳುಗಳ ಮೂಲಕ ನಮ್ಮ ಸಾಂಪ್ರದಾಯಿಕ ಎಣ್ಣೆಗೆ ಬದಲಾಗಿ ಸೂರ್ಯಕಾಂತಿ, ಸೋಯಾ, ಆಲೀವ್ ಎಣ್ಣೆಗಳೇ ಶ್ರೇಷ್ಟ ಎಂದು ನಂಬಿಸಿದ್ದಾರೆ.

ಅಜ್ಜಿಯ ಕಾಲದ ಖಾದ್ಯ ತೈಲಗಳನ್ನು ಮತ್ತೆ ವಾಪಸ್ ತರುವ ಉದ್ದೇಶದಿಂದ 'ಸಾಂಪ್ರದಾಯಿಕ ಎಣ್ಣೆಗಳ ಅಡುಗೆ ಸ್ಪರ್ಧೆ' ಏರ್ಪಡಿಸಲಾಗಿದೆ. ಸಾಂಪ್ರದಾಯಿಕ ಎಣ್ಣೆಗಳಿಂದ ತಯಾರಿಸಿದ ಅಡುಗೆಗಳನ್ನು ದಿನಾಂಕ 11 ಡಿಸೆಂಬರ್, ಭಾನುವಾರದಂದು ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ನಡೆಯುವ 'ಅಡುಗೆ ಎಣ್ಣೆ ಮೇಳ' ಕ್ಕೆ ತರಬೇಕು. ಬಳಸಿದ ಎಣ್ಣೆಯ ಸ್ಯಾಂಪಲ್ ಅಡುಗೆಯ ಜೊತೆ ಪ್ರದರ್ಶನಕ್ಕೆ ಇಡಬೇಕು.

ಅಪರೂಪದ ಎಣ್ಣೆ ಬಳಸಿ ಮಾಡಿದ ಅಡುಗೆಗಳಿಗೆ ವಿಶೇಷ ಪ್ರಾಶಸ್ತ್ಯ.‌ಆಯ್ದ ಅಡುಗೆಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು.

ಹೆದರಬೇಡಿ ಇದು        Don’t be afraidಹಾವು ಪಡುವಲ!         it's snake Gourd! ಹಸಿರು ಕಾಯಿಯ ಮೇಲೆ ಬಿಳಿ ಪಟ್ಟೆಗಳಿರುವ ಉದ್ದನಾಗಿ ಬೆಳೆ...
18/08/2025

ಹೆದರಬೇಡಿ ಇದು Don’t be afraid
ಹಾವು ಪಡುವಲ! it's snake Gourd!

ಹಸಿರು ಕಾಯಿಯ ಮೇಲೆ ಬಿಳಿ ಪಟ್ಟೆಗಳಿರುವ ಉದ್ದನಾಗಿ ಬೆಳೆಯುವ ಈ ತಳಿ ನೋಡಲು ಹಾವಿನಂತೆ ಇರುವುದರಿಂದ 'ಹಾವು ಪಡುವಲ' ಎಂದೂ ಕರೆಯುತ್ತಾರೆ.

ಮಣ್ಣನ್ನು ಹದಗೊಳಿಸಿ, ಸಾಲಿನಿಂದ ಸಾಲಿಗೆ ಆರು ಅಡಿ ಅಂತರ ಕೊಟ್ಟು, ಸಾಲಿನಲ್ಲಿ 1.5 ಅಡಿ ಆಳ‌ ಮತ್ತು 1 ಅಡಿ ಅಗಲದ ಗುಂಡಿ ತೆಗೆಯಬೇಕು. ಗುಂಡಿಯಿಂದ ಗುಂಡಿಗೆ 6 ಅಡಿ ಅಂತರವಿರಲಿ. ಗುಂಡಿಗೆ ಸಾಕಷ್ಟು ಕುರಿ ಗೊಬ್ಬರ ಮತ್ತು ಮಣ್ಣು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಪ್ರತಿ ಗುಂಡಿಗೆ ನಾಲ್ಕು ಬೀಜ ಬಿತ್ತಬೇಕು. ಚೆನ್ನಾಗಿ ನೆನೆಯುವಂತೆ ಬಿಂದಿಗೆಯಿಂದ ನೀರು ಹಾಕಿ.

ಬೀಜ ಬಿತ್ತಿ, ಗಿಡ ಬಂದ ಒಂದು ತಿಂಗಳ ನಂತರ ಚಪ್ಪರ ಹಾಕಿ ಬಳ್ಳಿ ಹಬ್ಬಿಸಬೇಕು. 60 ದಿನದ ನಂತರ ಕಾಯಿ ಬಿಡಲು ಶುರುವಾಗುತ್ತದೆ. ಮುಂದಿನ ನಾಲ್ಕು ತಿಂಗಳವರೆಗೂ ಪಡುವಲ ಕೊಯ್ಲಿಗೆ ಸಿಗುತ್ತದೆ.

ನಾಲ್ಕರಿಂದ ಐದು ಅಡಿ ಉದ್ದವಿರುವ ಹಾವು ಪಡವಲದ ಒಂದು ಕಾಯಿ ಎರಡರಿಂದ ಮೂರು ಕೆ.ಜಿ. ತೂಗುತ್ತದೆ. ಒಂದು ಬಳ್ಳಿ ನಾಲ್ಕು ತಿಂಗಳಲ್ಲಿ 40 ರಿಂದ 50 ಕಾಯಿ ನೀಡುತ್ತದೆ. ವಾರಕ್ಕೊಮ್ಮೆ ಕಾಯಿಯನ್ನು ಕಟಾವು ಮಾಡಬೇಕು. ಬಲಿಯಲು ಬಿಡಬಾರದು.

ಇದರ ಘಮಲು ಮತ್ತು ಗಾತ್ರಕ್ಕೆ ಮನಸೋಲುವ ಗ್ರಾಹಕರು ಕೇಳಿದ ಬೆಲೆ ಕೊಟ್ಟು ಖರೀದಿಸುತ್ತಾರೆ. ಕಾಯಿಯ ಗಾತ್ರ ಉದ್ದವಿರುವದರಿಂದ, ಮುರಿಯದಂತೆ ಎಚ್ಚರಿಕೆ ವಹಿಸಿ ಮಾರುಕಟ್ಟೆಗೆ ಸಾಗಿಸಬೇಕು. ಹಾವು ಪಡುವಲದ ಬಜ್ಜಿ, ಪಲ್ಯ, ಸಾಂಬಾರು ಬಲು ರುಚಿ.

ಹಾವು ಪಡುವಲದ ಬೀಜಕ್ಕಾಗಿ ಸಹಜ ಸೀಡ್ಸ - 70900 09911 ಸಂಪರ್ಕಿಸಿ.

Don’t be afraid – this is Snake Gourd!

This variety grows long with white stripes on the green fruit. Because it looks like a snake, it is called Snake Gourd (Haavu Padaval).

Prepare the soil well. Keep six feet distance between rows. In each row, dig pits 1.5 feet deep and 1 foot wide, leaving six feet between pits. Mix enough sheep manure and soil in the pit thoroughly. Sow four seeds in each pit. Water well with a pot so the soil is moist.

A month after sowing, provide a pandal/trellis for the vines to spread. After 60 days, the gourds start appearing. Harvest continues for the next four months.

A single snake gourd grows 4–5 feet long and weighs 2–3 kg. Each vine produces 40–50 gourds in four months. Harvest should be done weekly, without leaving fruits to over-ripen.

Because of its attractive fragrance and size, customers willingly pay the asked price. Since the fruits are long, take care during transport so they don’t break. Snake gourd bajji (fritters), palya (stir-fry), and sambar are very tasty.

For snake gourd seeds, contact Sahaja Seeds – 70900 09911.

Desi Seed Festival @ IAT, Bengaluruon 14-15 June. Please come
11/06/2025

Desi Seed Festival @ IAT, Bengaluru
on 14-15 June. Please come

Jackfruit Festival 3 and 4 th May 2025, 10 am to 8 pmNanjaraja Badhur Chatra , Mysuru-Experience the Wonder of Jackfruit...
22/04/2025

Jackfruit Festival
3 and 4 th May 2025, 10 am to 8 pm
Nanjaraja Badhur Chatra , Mysuru

-Experience the Wonder of Jackfruit!
- Red, White and Yellow fleshed jackfruits for sale
- Jackfruit dishes and value added products
- For those interested in cultivating jackfruit trees, a variety of saplings including Red Fleshed Siddu and Shankara are available for sale.

# Jackfruit lifting competition on Saturday 5 pm
# Jackfruit eating competition on Sunday 1 pm


Don't miss! Admission is free!!

Contact 94821 15495 / ‭9535149520

ಸೊಪ್ಪಿನ ಕ್ಯಾಲೆಂಡರ್‌ 2025  ಸಿದ್ಧವಾಗುತ್ತಿದೆ.‌ ಅದರ ಮುಖಪುಟಕ್ಕೆ ಸೆಲೆಬ್ರಿಟಿ ಒಬ್ಬರು ಬೇಕಿತ್ತು. ನಮಗೋ ರಾಜಕಾರಣ  ಮತ್ತು ಸಿನಿಮಾ ಎರಡೂ ದ...
13/12/2024

ಸೊಪ್ಪಿನ ಕ್ಯಾಲೆಂಡರ್‌ 2025 ಸಿದ್ಧವಾಗುತ್ತಿದೆ.‌ ಅದರ ಮುಖಪುಟಕ್ಕೆ ಸೆಲೆಬ್ರಿಟಿ ಒಬ್ಬರು ಬೇಕಿತ್ತು. ನಮಗೋ ರಾಜಕಾರಣ ಮತ್ತು ಸಿನಿಮಾ ಎರಡೂ ದೂರ. ನಮ್ಮ ಮುಂಚಿನ ಕ್ಯಾಲೆಂಡರ್ ಗಳ ರೂಪದರ್ಶಿಗಳಾಗಿದ್ದ ಕಿಶೋರ್ ,ಯಮುನಾ ಮೇಡಂ, ರಮೇಶ್ ಮತ್ತು ಅಕ್ಷತಾ ಪಾಂಡವಪುರ ಕೃಷಿ ಮತ್ತು ಕೃಷಿಕರ ಬಗ್ಗೆ ಆಸಕ್ತಿ ಇದ್ದವರು, ಖುಷಿಯಿಂದ ನಮ್ಮ ಮೇಳಗಳ ಭಾಗವಾದವರು. ಯಮುನಾ ಮೇಡಂ‌ ಅಂತೂ ' ಮೈಸೂರು ಬರ್ತಿದೀನಿ. ಪೋಟೋ ಶೂಟ್ ಇದ್ದರೆ ಮಾಡೋಣ' ಎಂದು ತಮ್ಮದೇ ಕಾರಿನಲ್ಲಿ ಬಂದು ಹಣ್ಣು ಹಂಪಲು ,ಧಾನ್ಯ ಹಿಡಿದು ಸಂಭ್ರಮಿಸುತ್ತಾರೆ.

ಈ ವರ್ಷದ ಸೊಪ್ಪಿನ ಕ್ಯಾಲೆಂಡರ್ ನ ಮುಖಪುಟಕ್ಕೆ ಡಾಲಿ ಧನಂಜಯ ಸೂಕ್ತ ಎಂದು ನಮ್ಮ ತಂಡ ಸೂಚಿಸಿತು. ಅವರು ಹೇಗೂ ಮೈಸೂರಿನ ಒಡನಾಟ ಉಳ್ಳವರು; ರೈತರ ಬಗ್ಗೆ ಪ್ರೀತಿ ಉಳ್ಳವರು.

ಕನ್ನಡ ಪ್ರಭದ ಗೆಳೆಯ ವಿನೋದ್ ನಾಯಕ್, ಡಾಲಿ ಧನಂಜಯರ ಭೇಟಿ ಮಾಡಿಸಿದರು. ಸೊಪ್ಪಿನ ಬುಟ್ಟಿ, ಸಹಜ ಆರ್ಗಾನಿಕ್ಸನ ಉತ್ಪನ್ನಗಳ ಹಿಡಿದ ಡಾಲಿ ಖುಷಿಯಿಂದ ಪೋಸ್ ಕೊಟ್ಟರು. ' ತುಂಬಾ ಒಳ್ಳೆಯ ಪ್ರಯತ್ನ. ಬಿಡುವಾಗಿ ಒಮ್ಮೆ ಸಹಜ ಆರ್ಗಾನಿಕ್ಸ ಬರುವೆ. ರೈತರ ಕಂಪನಿಗಳು ಬೆಳೆಯಬೇಕು' ಎಂದು ಹಾರೈಸಿದರು.

ಚಿತ್ರ ಜಗತ್ತಿನ ತಾರೆಯರು ರೈತ ಕಂಪನಿಗಳ ಜೊತೆ ನಿಲ್ಲಬೇಕಿದೆ. ನಂದಿನಿ ಬ್ರಾಂಡ್ ಗೆ ಇರುವಂತೆ, ಪ್ರತಿ ರೈತ ಉತ್ಪಾದಕರ ಕಂಪನಿಗಳಿಗೂ ರಾಯಭಾರಿಗಳು ಬೇಕು. ಅನ್ನದ ಖುಣ ತೀರಿಸಲು ಇದು ಚಿತ್ರ ಜಗತ್ತು ನೀಡುವ ಕೊಡುಗೆ

Dharwad Banana Mela on 28-30 November at Gandhi Shanthi Prathistana, Court Circle.  Please come.
27/11/2024

Dharwad Banana Mela on 28-30 November at Gandhi Shanthi Prathistana, Court Circle.
Please come.

Banana Festival in MysuruThe world of bananas is vast. From birth to death, bananas are an integral part of life, with h...
20/11/2024

Banana Festival in Mysuru

The world of bananas is vast. From birth to death, bananas are an integral part of life, with hundreds of varieties differing in taste, color, size, and height. As the birthplace of bananas, India boasts hundreds of varieties.

In the forests of the northeastern states, wild bananas dominate the landscape. The "Bheem Kal" from this region grows to impressive heights, with its stems resembling pillars. Kerala’s "Sahasra Baale" variety grows tall and bears 8 feet long bunch , while certain varieties produce small, ball-sized bananas.

Karnataka is renowned for its banana diversity. It is home to unique varieties such as Kamalapura Red Banana, Elakki Baale, Nanjangud Rasabaale, Kallu Baale, Naati Baale, Boodu Baale, Hampi Sugandhi, Sakkare Baale, Hulibaale, and Chukke Baale. Unfortunately, the arrival of commercial varieties like Robusta and Cavendish has led to the decline of native varieties.

To celebrate the diversity of native bananas, Sahaja Samrudha, in collaboration with Akshaya Kalpa Organics, is organizing a Banana Festival at Nanjaraj Bahadur Choultry, Mysuru, from November 22 to 24. The event will showcase diverse banana varieties, value-added products, banana fiber crafts, and banana-based cuisines.

Vinod Nair from Kerala, who conserves 550 banana varieties, will exhibit 75 types. Prasad Hegde from Sirsi, who has preserved 80 varieties, will bring rare saplings. Senthil Kumar from Erode, Tamil Nadu conserved more than 150 desi banana varieties will bring 40 desi bananas for display. "Sahasra Baale," the world's tallest banana variety, will also be on display.

Availability of rare and unique banana variety planting materials has been a challenge. At the mela, quality suckers and plants of Nanjangud Banana, Yelakki Bale, Madarangi, Chandra Bale, Nendra Bale, Matti Banana, and other rare varieties will be available for purchase.

The fair will showcase a diverse range of banana-based and organic products. Visitors can also indulge in a variety of delectable dishes made from bananas at the food stalls. From traditional recipes to modern culinary innovations, the stalls will offer something to delight every palate.

On November 22 at 11 a.m., BAKAHU Millet Adda and Abhay Natural Food Processing Unit will conduct a training session on banana value addition will be conducted, featuring the experiences of Naveen Kumar from Hunsur and Varsha from Chamarajanagar. On November 23, 11 am organic banana cultivation expert and Rajyotsava awardee Shivanapura Ramesh will share his insights.

On November 24, ICAR-JSS Krishi Vigyan Kendra, Suttur, will host a children’s art competition at 10:30 AM, followed by a banana cooking contest at 12:00 PM. Participants can prepare any dish using banana fruit, raw banana, stem, or flowers at home and bring it to the fair. Exciting cash prizes await the winners!

Interested participants can register by calling 94821 15495.

ಹಿಪ್ಪು ನೇರಳೆ ಹಣ್ಣುಹಣ್ಣಿನ ಪಟ್ಟಿಗೆ ಹೊಸ ಸೇರ್ಪಡೆನಾಲ್ಕು ವರ್ಷಗಳ ಕೆಳಗೆ  ರಾಜಸ್ಥಾನದ ಬಾನಸವಾಡ ಪಟ್ಟಣದ  ಬೀಜಮೇಳಕ್ಕೆ ಹೋಗಿದ್ದೆ. ಬೀಜಮೇಳ‌ ...
07/10/2024

ಹಿಪ್ಪು ನೇರಳೆ ಹಣ್ಣು
ಹಣ್ಣಿನ ಪಟ್ಟಿಗೆ ಹೊಸ ಸೇರ್ಪಡೆ

ನಾಲ್ಕು ವರ್ಷಗಳ ಕೆಳಗೆ ರಾಜಸ್ಥಾನದ ಬಾನಸವಾಡ ಪಟ್ಟಣದ ಬೀಜಮೇಳಕ್ಕೆ ಹೋಗಿದ್ದೆ. ಬೀಜಮೇಳ‌ ಆಯೋಜನೆಯಾಗಿದ್ದ 'ವಾಗ್ದಾರ' ಎಂಬ ಸಂಸ್ಥೆಯ ಆವರಣದಲ್ಲಿ ಸಿಂಗಪುರ್ ಚೆರ್ರಿ ಮರದ ರೀತಿ ಹರಡಿಕೊಂಡ ಹಿಪ್ಪುನೇರಳೆ ಗಿಡವಿತ್ತು. ಗಿಡದ ತುಂಬಾ ಹಣ್ಣುಗಳು. ಕಿತ್ತಷ್ಟೂ ಬೊಗಸೆ ತುಂಬುತ್ತಿದ್ದವು. ನಾನಿದ್ದ ಎರಡೂ ದಿನ ಸಾಕು ಬೇಕಷ್ಟು ರೇಷ್ಮೆ ಹಣ್ಣು ತಿಂದಿದ್ದೆ.

ನಮ್ಮೂರಲ್ಲೂ ಹಿಪ್ಪು ನೇರಳೆ ಬೆಳೆಸುತ್ತಿದ್ದೆವು. ಆದರೆ ರೇಷ್ಮೆ ಹುಳುವಿನ ಮೇವಿಗೆ ಎಳೆಯ ಸೊಪ್ಪು ಕತ್ತರಿಸುತ್ತಿದ್ದರಿಂದ ಅದು ಬೆಳೆದು ಹಣ್ಣಾಗುವ ಅವಕಾಶ ಇರುತ್ತಿರಲಿಲ್ಲ. ಬದುವಿನಲ್ಲಿ ತಪ್ಪಿಸಿಕೊಂಡ ಗಿಡಗಳಲ್ಲಿ ಅಪರೂಪಕ್ಕೆ ಒಂದೆರೆಡು ರೇಷ್ಮೆ ಹಣ್ಣು ಸಿಗುತ್ತಿದ್ದವು.

ಇಲ್ಲಿ ನೋಡಿದರೆ ಗಿಡದ ತುಂಬಾ ಹಣ್ಣಿನ ಸುಗ್ಗಿ. ಅದರ ರುಚಿಗೆ ಮನಸೋತು ಒಂದಷ್ಟು ಕಡ್ಡಿಗಳನ್ನು ತಂದು ತೋಟದಲ್ಲಿ ನೆಟ್ಟಿದ್ದೆ. ಮೊನ್ನೆ ತೋಟಕ್ಕೆ ಹೋದಾಗ ನಾಲ್ಕು ವರ್ಷಗಳ ಹಿಂದೆ ನೆಟ್ಟ ರಾಜಸ್ಥಾನದ ಹಿಪ್ಪುನೇರಳೆ ಗಿಡ ಸಣ್ಣ ಮರವಾಗಿ , ಹಣ್ಣು ಹೊತ್ತು ತೊನೆಯುತ್ತಿತ್ತು. ಮನಸೋ ಇಚ್ಚೇ ತಿಂದು ಸಂಭ್ರಮಪಟ್ಟೆ.

*ಹಿಪ್ಪು ನೇರಳೆ ಹಣ್ಣಿನ ತಳಿಗಳು*

ಹಿಪ್ಪು ನೇರಳೆಯಲ್ಲಿ ನೂರಾರು ತಳಿಗಳಿವೆ. ತಮಿಳುನಾಡಿನ ಹೊಸೂರಿನಲ್ಲಿರುವ ರೇಷ್ಮೆ ಸಂಶೋಧನಾ ಕೇಂದ್ರದಲ್ಲಿ 1269 ತಳಿಗಳ ಸಂಗ್ರಹವಿದೆ. ರೇಷ್ಮೆ ಕೃಷಿಗೆ ಬಳಸುವ ಸಾಮಾನ್ಯ ಹಿಪ್ಪು ನೇರಳೆ ತಳಿಗಳು‌ ಹಣ್ಣಿಗೆ ಸೂಕ್ತವಲ್ಲ. ಮರವಾಗುವ , ಸಿಹಿ ರುಚಿ ಇರುವ ಉದ್ದನಾದ ಹಣ್ಣಿನ ವಿಶೇಷ ತಳಿಗಳ ಬೆಳೆಸಬೇಕು. ಈ ತಳಿಗಳು ಸಾಕು ಬೇಕಷ್ಟು ಹಣ್ಣು ಕೊಡುತ್ತವೆ; ನೆರಳೂ ನೀಡುತ್ತವೆ.

ನೆಟ್ಟ ಒಂದು ವರ್ಷಕ್ಕೆ ಹಣ್ಣು ಸಿಕ್ಕರೂ‌, ಸಮೃದ್ದವಾಗಿ ಫಲ ನೀಡಲು ಮೂರು - ನಾಲ್ಕು ವರ್ಷ ಕಾಯಬೇಕು. ಹಿಪ್ಪು ನೇರಳೆ ಹಣ್ಣಿನ ತಳಿಯ ಹತ್ತಾರು ಗಿಡಗಳನ್ನು ಹೊಲದ ಬದುವಿನ ಮೇಲೆ ನೆಟ್ಟರೆ ಆದಾಯದ ಹೊಸ ಮೂಲವೊಂದು ತೆರೆದುಕೊಳ್ಳುತ್ತದೆ. ರೋಗ ಕೀಟಗಳ ಬಾಧೆಯಿಲ್ಲ. ಹೆಚ್ಚು ನೀರು, ಆರೈಕೆ ಕೇಳುವುದಿಲ್ಲ.

*ಔಷಧಿ ಗುಣಗಳ ಖಜಾನೆ*

ಹಿಪ್ಪು ನೇರಳೆ ಹಣ್ಣಿನ ಬಳಕೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ದೃಷ್ಟಿ ದೋಷ ಸುಧಾರಿಸುತ್ತದೆ. ರಕ್ತ ಶುದ್ದೀಕರಣಕ್ಕೆ ಸಹಕಾರಿ. ನರದೌರ್ಬಲ್ಯದಿಂದ ಬಳಲುವವರಿಗೂ ಇದು ಔಷಧಿ‌.

ಹಿಪ್ಪುನೇರಳೆ ಹಣ್ಣು ವಿಟಮಿನ್ ಸಿ,ವಿಟಮಿನ್ ಇ , ಪೊಟಾಷಿಯಂ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಹಾಗಾಗಿ ರಕ್ತಪುಷ್ಟಿ ಹೆಚ್ಚಿಸಲು ಸಹಕಾರಿ.
ಹಿಪ್ಪು ನೇರಳೆ ಹಣ್ಣು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿ. ಹಾಗಾಗಿ ಮಧುಮೇಹಿಗಳು ಅಂಜಿಕೆಯಿಲ್ಲದೆ ಹಿಪ್ಪುನೇರಳೆ ಹಣ್ಣು ಚಪ್ಪರಿಸಬಹುದು.

ಹಿಪ್ಪು ನೇರಳೆ ಹಣ್ಣು ತಿನ್ನುವುದರಿಂದ ನಮ್ಮ ದೇಹದ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬು ಕಡಿಮೆಯಾಗುತ್ತದೆ. ಹಿಪ್ಪು ನೇರಳೆ ಹಣ್ಣಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣದ ಅಂಶ ಇದ್ದು ಇದು ನಮ್ಮ ದೇಹದಲ್ಲಿ ರಕ್ತ ಚಲನೆಯನ್ನು ವೃದ್ಧಿಸುತ್ತದೆ.ರೋಗ ನಿರೋಧಕ ಶಕ್ತಿ‌ಹೆಚ್ಚಿಸುತ್ತದೆ.

*ಮೌಲ್ಯವರ್ಧನೆಯ ಅವಕಾಶಗಳು*

ಕಳಿತ ಹಣ್ಣುಗಳನ್ನು ಮಾರುಕಟ್ಟೆಗೆ ತರುವುದು ಕಷ್ಟ. ಹಾಲಿನಂತೆ ಫ್ರಿಜ್ ನಲ್ಲಿ ಸಂಗ್ರಹಿಸಿಡಬೇಕು. ಇಲ್ಲವೆ ರೈತ ಸಂತೆಗಳಲ್ಲಿ ನೇರ ಮಾರಾಟ ಮಾಡಬೇಕು. ರೇಷ್ಮೆ ಹಣ್ಣನ್ನು ಒಣ ದ್ರಾಕ್ಷಿಯಂತೆ ನಿರ್ಜಲೀಕರಣ ಮಾಡಿ ಮಾರುವುದು ಹೆಚ್ಚು ಲಾಭದಾಯಕ. ಮಹಾರಾಷ್ಟ್ರದ ಕಂಪನಿಯೊಂದು ಇದಾಗಲೇ ಒಣ ರೇಷ್ಮೆ ಹಣ್ಣನ್ನು ಮಾರುಕಟ್ಟೆಗೆ ತಂದಿದೆ.

ನನ್ನ ತೋಟದ ಹಿಪ್ಪು ನೇರಳೆ ಹಣ್ಣನ್ನು ಎರಡು ದಿನ ಡ್ರೈಯರ್ ನಲ್ಲಿಟ್ಟು ಒಣಗಿಸಿ ನೋಡಿದೆ. ಒಣ ದ್ರಾಕ್ಷಿಯಂತೆ ರುಚಿಯಾಗಿತ್ತು. ಬೇಗ ಬೂಸ್ಟ್ ಬರುವುದರಿಂದ, ಒಣಗಿಸುವಾಗ ಜಾಗ್ರತೆ ವಹಿಸಬೇಕು. ಹಿಪ್ಪುನೇರಳೆ ಹಣ್ಣು ರುಬ್ಬಿ, ಜೇನುತುಪ್ಪ ಸೇರಿಸಿದರೆ ರುಚಿಕರ ಜಾಮ್ ಸಿದ್ಧವಾಗುತ್ತದೆ.

ಎಳೆಯ ಹಿಪ್ಪುನೇರಳೆ ಎಲೆಯ ಚೂರುಗಳನ್ನು ಕುದಿಯುವ ನೀರಿಗೆ ಹಾಕಿ 'ಹರ್ಬಲ್ ಟೀ' ತಯಾರಿಸಬಹುದು. ಎಲೆಗಳನ್ನು ಒಣಗಿಸಿ, ಪುಡಿ ಮಾಡಿ ಕೂಡ ಚಹಾ ತಯಾರಿಸಬಹುದು. ಇದರ ಸೇವನೆಯಿಂದ ಸುಖಕರ ನಿದ್ದೆ ಬರುತ್ತದೆ. ನರಗಳ‌ ಸೆಳೆತ ಕಡಿಮೆಯಾಗುತ್ತದೆ. ಯಾವನೋ ಪುಣ್ಯಾತ್ಮ ರೇಷ್ಮೆ ಎಲೆ ಪುಡಿ ಮಾಡುವ ವಿಧಾನವನ್ನೂ ಪೇಟೆಂಟ್ ಮಾಡಿಕೊಂಡಿದ್ದಾನಂತೆ!.

ಥಾಯಲ್ಯಾಂಡ್ ದೇಶದ ಹಣ್ಣಿನ ಅಂಗಡಿಗಳಲ್ಲಿ ಇದರ ಹಣ್ಣು ಮಾರಾಟಕ್ಕೆ ಸಿಗುತ್ತದೆ‌. ಜಾಮ್ ಜಲ್ಲಿ ಮೊದಲಾದ ಇದರ ಮೌಲ್ಯವರ್ಧಿತ ಪದಾರ್ಥಗಳು ಲಭ್ಯ.

ಮೈಸೂರು- ಕೆಆರ್​ಎಸ್ ರಸ್ತೆಯಲ್ಲಿ ಬೆಳಗೊಳ ಸಮೀಪ ಇರುವ 'ಬೆಳವಲ ಪರಿಸರ ತೋಟ' ದಲ್ಲಿ ಹಣ್ಣಿನ ತಳಿಯ ಹಿಪ್ಪು ನೇರಳೆ ಗಿಡಗಳು ಲಭ್ಯವಿವೆ.
ಆಸಕ್ತರು ಮದನ್ -7411048468 ಸಂಪರ್ಕಿಸಬಹುದು.

Address

# 84, B Block, APMC Yard Bandipalya, Mysuru-

570025

Opening Hours

Monday 10:00 - 18:30
Tuesday 10:00 - 18:30
Wednesday 10:00 - 18:30
Thursday 10:00 - 18:30
Friday 10:00 - 18:30
Saturday 10:00 - 18:30

Telephone

+917090009911

Alerts

Be the first to know and let us send you an email when Sahaja Seeds posts news and promotions. Your email address will not be used for any other purpose, and you can unsubscribe at any time.

Contact The Business

Send a message to Sahaja Seeds:

  • Want your business to be the top-listed Home Improvement Business?

Share

We are India's first farmer owned organic seed company!

Sahaja Samrudha, an organic farmers collective, has spearheaded a movement for the promotion of ecological agriculture through the revival of indigenous seeds. In its journey, it has met and has been inspired by many local seed savers. These are people who had reproduced and handed down from generation to generation, seeds that had unmatched richness of flavor, nutritional benefit, and resistance to pest and diseases.

In an effort to bring these exotic varieties to the consumers, while assuring quality and purity, Desi Seed Producer Company Limited was born!

Today, our seed savers are producing more than a 100 potential varieties that can be grown by any consumer - from the urban apartments to the rural fields. These varieties have been carefully picked to meet high standards of flavor and nutrition.